ಅರಕಲಗೂಡು:ಕೋವೀಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿ ಜೊತೆಗೆ ದೈಹಿಕ ಹಲ್ಲೆಗೂ ಗ್ರಾಮಸ್ಥರು ಮುಂದಾಗುತ್ತಾರೆ ಎಂದು ಆರೋಪಿಸಿ ಶಾಸಕ ಎ.ಟಿ.ರಾಮಸ್ವಾಮಿಗೆ ಆಶಾ ಕಾರ್ಯಕರ್ತೆಯರು ದೂರು ಸಲ್ಲಿಸಿದರು.
ಕರ್ತವ್ಯ ನಿರ್ವಹಣೆಗೆ ಅಡ್ಡಿ: ಶಾಸಕ ರಾಮಸ್ವಾಮಿಗೆ ಆಶಾ ಕಾರ್ಯಕರ್ತೆಯರಿಂದ ದೂರು
ಕರ್ತವ್ಯ ನಿರ್ವಹಣೆ ವೇಳೆ ನಿಂದಿಸುವುದಲ್ಲದೆ ದೈಹಿಕ ಹಲ್ಲೆಗೂ ಗ್ರಾಮಸ್ಥರು ಮುಂದಾಗುತ್ತಾರೆ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ಶಾಸಕ ಎ.ಟಿ.ರಾಮಸ್ವಾಮಿಗೆ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಕೋವೀಡ್-19 ನಿಯಂತ್ರಣದ ಕರ್ತವ್ಯ ವೇಳೆ ಗ್ರಾಮಸ್ಥರು ಅಡ್ಡಿಯುಂಟು ಮಾಡುತ್ತಿದ್ದಾರೆ. ಇದರ ಜೊತೆಗೆ ವೈಯಕ್ತಿಕ ದ್ವೇಷ ಕಾರಣವಾಗುತ್ತಿದೆ ಎಂದು ಆಶಾ ಕಾರ್ಯಕರ್ತೆಯರು ಶಾಸಕರಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದರು. ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಗ್ರಾಮಕ್ಕೆ ಹೊಸದಾಗಿ ಬಂದಿರುವ ವ್ಯಕ್ತಿಗಳನ್ನು ಮತ್ತು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಿಗೆ ಕೋವೀಡ್ ತಪಾಸಣೆಗೆ ಒಳಪಡಲು ಹೇಳಿ ಮಾಹಿತಿ ಕಲೆಹಾಕಲು ಹೋದರೆ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಜೊತೆಗೆ ದೈಹಿಕ ಹಲ್ಲೆಗೂ ಮುಂದಾಗುತ್ತಾರೆ. ಹೀಗೆ ಮುಂದುವರೆದರೆ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ. ನಮಗೆ ರಕ್ಷಣೆ ಬೇಕು ಎಂದು ಆಳಲು ತೋಡಿಕೊಂಡರು.
ಇದೇ ವೇಳೆ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿ, ಕೊರೊನಾ ನಿಯಂತ್ರಣ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅದು ಅಪರಾಧ. ಅಂತಹ ಘಟನೆಗಳು ಕಂಡುಬಂದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಎಂ.ರೇಣುಕುಮಾರ್ಗೆ ಸೂಚನೆ ನೀಡಿದರು.
TAGGED:
ಕರ್ತವ್ಯ ನಿರ್ವಹಣೆಗೆ ಅಡ್ಡಿ