ಕರ್ನಾಟಕ

karnataka

ETV Bharat / state

ಬ್ರಿಟೀಷರ ಸಹೋದರರಂತಿದೆ ದೇವೇಗೌಡರ ಕುಟುಂಬ: ಶಾಸಕ ಪ್ರೀತಂಗೌಡ ಕಿಡಿ - ಶಾಸಕ

ಕುಟುಂಬ ರಾಜಕಾರಣದ ವಿರುದ್ಧ ದ್ವನಿಯೆತ್ತುವವರು ಬಿಜೆಪಿಗೆ ಬನ್ನಿ. ಈಗಾಗಲೇ ಬಿ ಎಂ ರಸ್ತೆ ಯನ್ನು ಹೊಡೆದು ಅಲ್ಲಿದ್ದ ಬಡ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ. ಸಕಲೇಶಪುರದ ರಸ್ತೆಯನ್ನು ಹೊಡೆಯುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹವರ ಕುಟುಂಬ ರಾಜಕಾರಣ ಬೇಕಾ ಎಂದು ಪ್ರಶ್ನೆ ಮಾಡಿದರು.

ಶಾಸಕ ಪ್ರೀತಂಗೌಡ

By

Published : Mar 24, 2019, 4:06 AM IST

ಹಾಸನ: ಬ್ರಿಟೀಷರು ದೇಶವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ರು. ಆದ್ರೆ, ಬ್ರಿಟೀಷರ ಸಹೋದರರಂತಿರುವ ದೇವೇಗೌಡರ ಕುಟುಂಬದ ಅಪ್ಪ ಮಕ್ಕಳು ಸೇರಿ ಈಗಾಗಲೇ 60 ವರ್ಷ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಗೌಡರ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದ ಗುರುರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ನೂರು ವರ್ಷದ ರಾಜಕಾರಣ ಮಾಡೋದಕ್ಕೆ ಮೊಮ್ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ಮುಂದಿನ 40 ವರ್ಷಕ್ಕೆ ಅಡಿಪಾಯ ಹಾಕುತ್ತಿದ್ದಾರೆ ಎಂದರು.

ಶಾಸಕ ಪ್ರೀತಂಗೌಡ

ಪ್ರತಿಬಾರಿಯೂ ನನ್ನನ್ನ ಆಕಸ್ಮಿಕವಾಗಿ ಬಂದ ಶಾಸಕ, ಲಾಟರಿ ಮೂಲಕ ಗೆದ್ದು ಶಾಸಕರಾಗಿದ್ದಾರೆ ಅಂತ ಗೇಲಿ ಮಾಡುತ್ತಿರುತ್ತಾರೆ ಅಂತವರಿಗೆ ಕಳೆದ ನಗರಸಭಾ ಚುನಾವಣೆಯಲ್ಲಿ ಟ್ರಯಲ್ ಆಗಿ ಉತ್ತರ ಕೊಟ್ಟಿದ್ದು, ಹಾಸನದಲ್ಲಿ. ಅವರು ಇದುವರೆವಿಗೂ ನೋಡಿರದ ಕೆಲವು ಏರಿಯಾಗಳನ್ನು ಕೂಡ ತೋರಿಸಿದ್ದೇವೆ. ಕನ್ನಡ ಸ್ವತಂತ್ರಕ್ಕಾಗಿ ನಾವು ಬ್ರಿಟಿಷರ ವಿರುದ್ಧ ಹೋರಾಡಿದ ದೇವಿ ಅಂತ ಕಾಂಗ್ರೆಸ್ಸಿನವರು ಬೆನ್ನು ತಟ್ಟಿ ಹೇಳಿಕೊಳ್ಳುತ್ತಾರೆ. ಆದರೆ, ಅಂತಹ ಬ್ರಿಟಿಷರ ಸಹೋದರರ ಬೆನ್ನ ಹಿಂದೆಯೇ ದೋಸ್ತಿ ಸರ್ಕಾರ ಮಾಡಿ ಮತ್ತೆ ಕೆಲ ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸಲು ಇಂದೇ ಹೋಗ್ತಾರಲ್ಲ ಇಂಥವರಿಗೆ ಏನನ್ನ ಬೇಕು ಅಂತ ಟೀಕಿಸಿದರು.

ಕುಟುಂಬ ರಾಜಕಾರಣದ ವಿರುದ್ಧ ದ್ವನಿಯೆತ್ತುವವರು ಬಿಜೆಪಿಗೆ ಬನ್ನಿ. ಈಗಾಗಲೇ ಬಿ ಎಂ ರಸ್ತೆ ಯನ್ನು ಹೊಡೆದು ಅಲ್ಲಿದ್ದ ಬಡ ಕಾರ್ಮಿಕರನ್ನು ಬೀದಿಪಾಲು ಮಾಡಿದ್ದಾರೆ. ಸಕಲೇಶಪುರದ ರಸ್ತೆಯನ್ನು ಹೊಡೆಯುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹವರ ಕುಟುಂಬ ರಾಜಕಾರಣ ಬೇಕಾ ಅಥವಾ ನೆಮ್ಮದಿಯಿಂದದ ನಿಟ್ಟುಸಿರು ಬಿಡುವಂತೆ ಮಾಡುವ ಮೋದಿ ಸರ್ಕಾರ ಬೇಕಾ ಎಂಬುದನ್ನು ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ ಅಂತ ಸಲಹೆ ನೀಡಿದರು.

ABOUT THE AUTHOR

...view details