ಹಾಸನ:ಕಳೆದ ಒಂದು ತಿಂಗಳು ಹಿಂದೆ ಕಾಣೆಯಾಗಿದ್ದ ಯುವಕನ ಮೃತದೇಹವೊಂದು ಹೊಳೆನರಸೀಪುರ ತಾಲೂಕಿನ ಬಾಗೀವಾಳು ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ತಿಂಗಳ ಹಿಂದೆ ಕಾಣೆಯಾಗಿದ್ದ ಯುವಕನ ಶವ ಅರಣ್ಯದಲ್ಲಿ ಪತ್ತೆ..! - dead body
ಕಣ್ಮರೆಯಾಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಕೊಳೆತ ಸ್ಥಿತಿಯಲ್ಲಿದ್ದ ದೇಹದ ಮೇಲಿದ್ದ ಬಟ್ಟೆಗಳನ್ನು ನೋಡಿ ಪತ್ತೆ ಹಚ್ಚಿದ ಸಂಬಂಧಿಕರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ತಾಲೂಕಿನ ಕಾಮೇನಹಳ್ಳಿ ನಿವಾಸಿ ಮಂಜೇಗೌಡ (28) ಎಂಬುವನ ಮೃತದೇಹ ಇದಾಗಿದೆ ಎಂದು ತಿಳಿದು ಬಂದಿದೆ. ಮೃತ ಯುವಕ ತಿಂಗಳ ಹಿಂದೆಯೇ ನಾಪತ್ತೆಯಾಗಿದ್ದ. ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೊಳೆತ ಸ್ಥಿತಿಯಲ್ಲಿದ್ದ ದೇಹದ ಮೇಲಿದ್ದ ಬಟ್ಟೆಗಳನ್ನು ನೋಡಿ ಪತ್ತೆ ಹಚ್ಚಿದ ಸಂಬಂಧಿಕರು ಈತನನ್ನು ಯಾರೋ ಕೊಲೆಮಾಡಿ ಇಲ್ಲಿ ತಂದು ಬಿಸಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.