ಹಾಸನ:ಜಿಲ್ಲೆಯ ಅರಕಲಗೂಡು ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹತ್ಯೆ ಮಾಡಿ ಬಿಸಾಡಿರುವ ಅನುಮಾನ ಮೂಡಿದೆ.
ಅರಕಲಗೂಡು: ರಸ್ತೆ ಬದಿ ಶವ ಪತ್ತೆ, ಕೊಲೆ ಶಂಕೆ - ಅರಕಲಗೂಡು ಹಾಸನ ಲೆಟೆಸ್ಟ್ ನ್ಯುಸ್
ಅರಕಲಗೂಡಿನಲ್ಲಿ ರಸ್ತೆ ಬದಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ.
![ಅರಕಲಗೂಡು: ರಸ್ತೆ ಬದಿ ಶವ ಪತ್ತೆ, ಕೊಲೆ ಶಂಕೆ Dead body found at Arakkalagudu road](https://etvbharatimages.akamaized.net/etvbharat/prod-images/768-512-8659651-thumbnail-3x2-murder.jpg)
ಅರಕಲಗೂಡು ರಸ್ತೆ ಬದಿ ಶವ ಪತ್ತೆ
ಅರಕಲಗೂಡು ರಸ್ತೆ ಬದಿ ಶವ ಪತ್ತೆ
45 ರಿಂದ 50 ವರ್ಷದ ವ್ಯಕ್ತಿಯನ್ನು ಗುರುತು ಸಿಗದ ಹಾಗೆ ಮುಖವನ್ನು ವಿರೂಪಗೊಳಿಸಿರುವ ದುಷ್ಕರ್ಮಿಗಳು, ಅರಕಲಗೂಡು ತಾಲೂಕಿನ ಎರೆಬರೆ ಕಾವಲು ಬಳಿ ಶವ ಬಿಸಾಡಿ ಹೋಗಿದ್ದಾರೆ. ಶವವನ್ನು ಗಮನಿಸಿ ಕೊಲೆ ಎಂದು ಶಂಕಿಸಲಾಗಿದೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.