ಹಾಸನ: ಜಿಲ್ಲೆಯ ಕದಾಲು ಗ್ರಾಮದವರಾದ ಸಿಆರ್ಪಿಎಫ್ ಯೋಧರಾಗಿದ್ದ ಮೋಹನ್ ಕುಮಾರ್ ಡೆತ್ನೋಟ್ ಬರೆದಿಟ್ಟು ,ತಮಗೆ ಕೊಟ್ಟಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೋಹನ್ ಕುಮಾರ್ಕಳೆದ 8 ವರ್ಷಗಳಿಂದ ಭಾರತೀಯ ವಾಯ ಸೇನೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಎರಡು ತಿಂಗಳ ಹಿಂದಷ್ಟೆ ಮದುವೆ ಮಾಡಿಕೊಂಡಿದ್ದರು .ಮೋಹನ್ ಕರ್ತವ್ಯದಲ್ಲಿರುವಾಗ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ಶೌಚಗೃಹದ ಬಾಗಿಲಿನ ಬಳಿ ತಮ್ಮ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣವೆನೆಂಬುದು ತಿಳಿದು ಬಂದಿಲ್ಲ. ಆದ್ರೆ ಆತ್ಮಹತ್ಯೆಗೂ ಮುನ್ನ ಪತ್ರವೊಂದನ್ನ ಬರೆದಿಟ್ಟಿದ್ದರು ಎನ್ನಲಾಗಿದೆ. ಅಪ್ಪ ಅಮ್ಮ ಹುಟ್ಟಿನಿಂದ ಇಲ್ಲಿಯವರೆಗೆ ನಾನು ನಿಮಗೋಸ್ಕರ ಏನು ಮಾಡುವುದಕ್ಕೆ ಆಗಿಲ್ಲ. ಅಪ್ಪನಿಗೆ ಅಮ್ಮನಿಗೆ ಒಳ್ಳೆಯ ಮಗನಾಗದೇ ನಿಮಗೆ ಮೋಸ ಮಾಡಿದ್ದೇನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗದೇ, ಕೊನೆಗೆ ಹೆಂಡತಿಗೆ ಒಳ್ಳೆಯ ಗಂಡನಾಗಿಲ್ಲ ಅನಿಸುತ್ತಿದೆ ಎಂದು ಮನನೊಂದು ಬರೆದಿದ್ದಾರೆ.
ಹಾಸನ ಮೂಲದ ಸಿಆರ್ಪಿಎಫ್ ಯೋಧ ಆತ್ಮಹತ್ಯೆ ಮೃತ ಯೋಧ ಮೋಹನ್ ಕುಮಾರ್ ರವರ ಕಳೇಬರವನ್ನು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ತರಲಾಗುವುದೆಂದು ಮಿಲಿಟರಿ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರಂತೆ. ಮೃತ ಯೋಧನಿಗೆ ಪತ್ನಿ, ತಂದೆ, ತಾಯಿ ಮತ್ತು ಸಹೋದರ ಇದ್ದಾರೆ. ಮೋಹನ್ ಸಾವಿನಿಂದ ಅವರ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ.