ಹಾಸನ: ವೈದ್ಯರೊಬ್ಬರು ಅನಾರೋಗ್ಯದಿಂದಾಗಿ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಅನಾರೋಗ್ಯದಿಂದ ಹಾಸನದ ವೈದ್ಯ ಮೃತ
ರಜೆಯಿಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ತಲೆ ಸುತ್ತಿ ಬಿದ್ದಿದ್ದ ಶಶಿಕಿರಣ್ ಅವರಿಗೆ ಪ್ಯಾರಾಲಿಸಿಸ್ ಸ್ಟ್ರೋಕ್ ಆಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ಡಾ.ಶಶಿಕಿರಣ್ ಮೃತಪಟ್ಟವರು. ರಜೆಯಿಲ್ಲದೆ ನಿರಂತರವಾಗಿ ಕೆಲಸ ಮಾಡಿದ್ದ ಇವರಿಗೆ ಕೆಲಸದ ಸಮಯದಲ್ಲೇ ತಲೆನೋವು ಕಾಣಿಸಿಕೊಂಡಿತ್ತು. ಕರ್ತವ್ಯದಲ್ಲಿದ್ದಾಗಲೇ ತಲೆ ಸುತ್ತಿ ಬಿದ್ದಿದ್ದ ಶಶಿಕಿರಣ್ ಅವರಿಗೆ ಪ್ಯಾರಾಲಿಸಿಸ್ ಸ್ಟ್ರೋಕ್ ಆಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನ ವೆಂಟಿಲೇಟರ್ ಸಹಾಯದಲ್ಲಿದ್ದ ಇವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದಾವಣಗೆರೆ ಮೂಲದ ಡಾ.ಶಶಿಕಿರಣ್ ಕಳೆದ 4 ವರ್ಷಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವೈದ್ಯರಲ್ಲಿ ಕೋವಿಡ್ ಲಕ್ಷಣ ಕಂಡು ಬಂದಿಲ್ಲ ಎಂದು ಡಿಎಚ್ಒ ಸತೀಶ್ ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲಾ ವೈದ್ಯಕೀಯ ಸಂಘದ ಕಚೇರಿ ಬಳಿ ಮೃತದೇಹವನ್ನು ಇರಿಸಲಾಗಿದೆ. ಜಿಲ್ಲಾಧಿಕಾರಿ ಆರ್.ಗಿರೀಶ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.