ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ - coronavirus news in Hassan

ಹಾಸನ ಜಿಲ್ಲೆಯಲ್ಲಿ ಇಂದು ಮಹಾಮಾರಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ
ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ

By

Published : Jul 6, 2020, 11:28 PM IST

ಹಾಸನ: ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದು, ಜುಲೈ 1 ರಿಂದ ಜಿಲ್ಲೆಯಲ್ಲಿ ಪ್ರತಿದಿನ ಸಾವಿನ ಸರಣಿ ಮುಂದುವರೆದಿದ್ದು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

38 ವರ್ಷದ ಮಹಿಳೆ ಕೊರೊನಾ ವೈರಸ್​ನಿಂದ ಮೃತಪಟ್ಟಿದ್ದು, ಜುಲೈ 4 ರಂದು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ಇಂದು ವರದಿಯಾದ 49 ಕೋವಿಡ್ ಸೋಂಕಿತರ ಪೈಕಿ ಒಟ್ಟು 13 ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ. ಇವರ ಪೈಕಿ 9 ಮಂದಿ ವೈದ್ಯರು ಹಾಗೂ 4 ಮಂದಿ ಇತರ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ರೋಗಿ ಸಂಖ್ಯೆ 19,864 ಜೊತೆಗೆ ಈ ಸಿಬ್ಬಂದಿ ಸಂಪರ್ಕ ಹೊಂದಿದ್ದರು.

ABOUT THE AUTHOR

...view details