ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಇಂದು ಮೂವರಿಗೆ ಕೊರೊನಾ.. 151 ಮಂದಿ ಸೋಂಕಿನಿಂದ ಗುಣಮುಖ!! - ಹಾಸನ ಕೊರೊನಾ

ಪ್ರಸ್ತುತ 64 ಸಕ್ರಿಯ ಸೋಂಕಿತರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Corona
ಕೊರೊನಾ

By

Published : Jun 10, 2020, 9:30 PM IST

ಹಾಸನ :ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು 215 ಕೊರೊನಾ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.

ಈಗಾಗಲೇ 151 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 64 ಸಕ್ರಿಯ ಸೋಂಕಿತರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ ಮೂವರು ಸೋಂಕಿತರು ಅರಕಲಗೂಡು ತಾಲೂಕಿಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಾಸನ ಜಿಲ್ಲಾವಾರು ಕೊರೊನಾ ಪ್ರಕರಣಗಳು:

  • ಆಲೂರು-15
  • ಅರಕಲಗೂಡು-6
  • ಅರಸೀಕೆರೆ-3
  • ಚನ್ನರಾಯಪಟ್ಟಣ-151
  • ಹಾಸನ-15
  • ಹೊಳೆನರಸೀಪುರ-25

ABOUT THE AUTHOR

...view details