ಕರ್ನಾಟಕ

karnataka

ETV Bharat / state

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗೊಂದಲ: ಬೇಸರದಿಂದ ಹೊರನಡೆದ್ರು ಸಚಿವ ಗೋಪಾಲಯ್ಯ - ಹಾಸನ ಬಿಜೆಪಿ

ಬಿಜೆಪಿ ಕಾರ್ಯಕಾರಿಣಿ ಸಭೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಪ್ರೀತಮ್ ಗೌಡ ಗೈರಾಗಿದ್ದ ಹಿನ್ನೆಲೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಸಮಾಧಾನಗೊಂಡಿದ್ದರು. ಸಭೆಯನ್ನು ಮೊಟಕುಗೊಳಿಸಿ ಮಧ್ಯದಲ್ಲೇ ಹೊರನಡೆದಿದ್ದಾರೆ.

Confusion at BJP executive meeting which held in Hasan
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗೊಂದಲ

By

Published : Apr 1, 2021, 8:27 PM IST

ಹಾಸನ: ಏಪ್ರಿಲ್ 18ರಂದು ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಪೂರ್ವಭಾವಿ ಸಭೆ ನಡೆದಿದ್ದು, ಗೊಂದಲ ಸೃಷ್ಟಿಯಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಹಾಗೂ ಸ್ಥಳೀಯ ಶಾಸಕ ಪ್ರೀತಮ್ ಗೌಡ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗೊಂದಲ

ಇದರಿಂದ ಬೇಸರಗೊಂಡ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧ್ಯಕ್ಷ ಸುರೇಶ್​​​ಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇದಿಕೆಯ ಮೇಲೂ ಹೋಗದೆ ಜಿಲ್ಲಾಧ್ಯಕ್ಷ ಸುರೇಶ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೆಲಕಾಲ ವೇದಿಕೆಯ ಕೆಳಗೆ ನಿಂತು ವಾಪಸ್ ಹೋಗಲು ಮುಂದಾದರು. ಆದರೆ ಕೆಲವು ಕಾರ್ಯಕರ್ತರು ಮನವೊಲಿಸಿದರು. ಬಳಿಕ ವೇದಿಕೆಯ ಮೇಲೆ ಆಸೀನರಾಗದೇ ಕೇವಲ ಐದೇ ನಿಮಿಷದಲ್ಲಿ ತಮ್ಮ ಭಾಷಣವನ್ನು ಮುಗಿಸಿ ಹೊರನಡೆದರು.

ಇದನ್ನೂ ಓದಿ:ಹೆಚ್‌ಡಿಕೆಗೂ ಡಿನೋಟಿಫಿಕೇಶನ್‌ ಕಂಟಕ; ಏ.17ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್

ABOUT THE AUTHOR

...view details