ಹಾಸನ: ಜಿಲ್ಲೆಯಾದ್ಯಂತ ನಿನ್ನೆ ಭಾರಿ ಗಾಳಿ, ಮಳೆ ಸುರಿದಿದ್ದು ತೆಂಗಿನ ಮರವೊಂದು ಮನೆ ಮೇಲೆ ಉರುಳಿದ ಪರಿಣಾಮ ಮನೆಯ ಮೇಲ್ಬಾಗ ಜಖಂಗೊಂಡ ಘಟನೆ ನಡೆದಿದೆ.
ಭಾರೀ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ: ಅದೃಷ್ಟವಶಾತ್ ಕುಟುಂಬಸ್ಥರು ಬಚಾವ್
ಜಿಲ್ಲೆಯಲ್ಲಿ ಗಾಳಿ ಮಳೆಗೆ ತೆಂಗಿನ ಮರವೊಂದು ಮನೆ ಮೇಲೆ ಉರುಳಿದ ಪರಿಣಾಮ ಮನೆಯ ಮೇಲ್ಬಾಗ ಜಖಂಗೊಂಡು 30 ಸಾವಿರಾರು ರೂ. ಮೌಲ್ಯದ ವಸ್ತುಗಳು ನಷ್ಟಗೊಂಡಿವೆ.
ಕೆ.ಆರ್. ಪುರಂ 5ನೇ ಕ್ರಾಸ್ ರಸ್ತೆಯಲ್ಲಿ ವಾಸವಾಗಿರುವ ಕೆಪಿಟಿಸಿಎಲ್ ನಿವೃತ್ತ ಕಾರ್ಯನಿರ್ವಹಕ ಇಂಜಿನಿಯರ್ ವೆಂಕಟಕೃಷ್ಣ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಯ ಮೇಲ್ಭಾಗ ಜಖಂಗೊಂಡು ಸಾವಿರಾರು ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ‘
ಕಳೆದ ಎರಡು ವರ್ಷಗಳ ಹಿಂದೆಯೇ ಸಿಡಿಲಿಗೆ ಮರದ ಮೇಲ್ಭಾಗದಲ್ಲಿ ತೆಂಗಿನ ಎಲೆ, ಕಾಯಿ ಎಲ್ಲಾ ಸಂಪೂರ್ಣ ಸುಟ್ಟು ಹೋಗಿ ಖಾಲಿ ಮರದ ಕೊರಡು ಉಳಿದಿತ್ತು. ವೆಂಕಟಕೃಷ್ಣರವರು ಆಗಲಿಂದಲೂ ಮರ ತೆರವುಗೊಳಿಸಲು ಅನೇಕ ಬಾರಿ ಮನವಿ ಮಾಡಲಾಗಿದ್ದರೂ ಯಾವ ಪ್ರಯೋಜನವಾಗಲಿಲ್ಲ. ನಿನ್ನೆ ಸುರಿದ ಗಾಳಿ ಮಳೆಗೆ ತೆಂಗಿನ ಮರ ಮನೆ ಮೇಲೆ ಬಿದ್ದಿರುವುದರಿಂದ ಮನೆಯ ಬಹುತೇಕ ಹೆಂಚುಗಳು ಮರಿದು ಕೆಳಗೆ ಬಿದ್ದಿವೆ. ಮನೆ ಒಳಗಿದ್ದ 30 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಪುಡಿಪುಡಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.