ಕರ್ನಾಟಕ

karnataka

ETV Bharat / state

ದೇವೇಗೌಡ್ರು ರಾಜಕೀಯದಲ್ಲಿ ಸುಖಕ್ಕಿಂತ, ದುಃಖ ಅನುಭವಿಸಿದ್ದೇ ಹೆಚ್ಚು: ಕುಮಾರಸ್ವಾಮಿ - ಜೆಡಿಎಸ್

ದೇವೇಗೌಡ್ರು ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವಾಗ ಕಂಬನಿ ಮಿಡಿದ ಕ್ಷಣವನ್ನ ಹೀಯಾಳಿಸುವುದು ಹೃದಯ ಹೀನರು ಮಾಡುವ ಕೆಲಸ ಎಂದು ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದೇವೇಗೌಡರ ರಾಜಕೀಯದಲ್ಲಿ ಹೆಚ್ಚು ದುಃಖ ಅನುಭವಿಸಿದ್ದಾರೆ ಎಂದರು.

ಸಿಎಂ ಕುಮಾರಸ್ವಾಮಿ

By

Published : Mar 22, 2019, 6:49 PM IST

ಹಾಸನ: ದೇವೇಗೌಡ್ರು ರಾಜಕೀಯದಲ್ಲಿ ಸುಖವಾಗಿದ್ದಕ್ಕಿಂತ ನೋವಿನ ರಾಜಕೀಯ ಅನುಭವಿಸಿದ್ದೇ ಹೆಚ್ಚು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿ ಸಮೀಪ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಟಾಟಿಸಿ ಅವರು ಮಾತನಾಡಿದರು. ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ದೇವೇಗೌಡ್ರು ಆಯ್ಕೆಯಾಗಿದ್ದರು. ಪಕ್ಷೇತರವಾಗಿ ರಾಜ್ಯದ ಜನತೆಯ ಆಶೀರ್ವಾದಿಂದ ರಾಜಕೀಯದಲ್ಲಿ ಬೆಳೆದಿದ್ದಾರೆ. ನಾವು ಚಿಕ್ಕವರಿದ್ದಾಗ ಹಲವರ ದುಡಿಮೆಯನ್ನು ನಾವು ನೋಡಿದ್ದೆವು‌. ರಾಜ್ಯದ ಜನತೆ ದೇವೇಗೌಡರನ್ನು ಪಂಚಾಯತ್​ ಮಟ್ಟದಿಂದ ಕೆಂಪುಕೋಟೆವರೆಗೆ ಆಶೀರ್ವದಿಸಿದ್ದೀರ ಎಂದರು.

ಸಿಎಂ ಕುಮಾರಸ್ವಾಮಿ

ದೇವೇಗೌಡರಿಗೆ ಇರುವ ಪ್ರೀತಿ, ಮಮಕಾರ ನನಗೆ ಗೊತ್ತಿದೆ

ಇತ್ತೀಚೆಗೆ ಹೊಳೆನರಸೀಪುರದ ಮೂಡಲಹಿಪ್ಪೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ದೇವೇಗೌಡ್ರು ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವಾಗ ಕಂಬನಿ ಮಿಡಿದ ಕ್ಷಣವನ್ನ ಹೀಯಾಳಿಸುವುದು ಹೃದಯ ಹೀನರು ಮಾಡುವ ಕೆಲಸ. ಜಾತಿಯ ವ್ಯಾಮೋಹದಿಂದ ರಾಜ್ಯ ಹಾಳುಮಾಡುವುದು ಬೇಡ. ತಂದೆ ರೇವಣ್ಣ ಅವರೊಂದಿಗೆ ನೆರವಾಗುತ್ತಾನೆ ಎಂದು ದೇವೇಗೌಡ್ರು ಪ್ರಜ್ವಲ್​ನನ್ನು ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ಜಿಲ್ಲೆಯ ಜನತೆ ಬಗ್ಗೆ ದೇವೇಗೌಡರಿಗೆ ಇರುವ ಪ್ರೀತಿ, ಮಮಕಾರ ನನಗೆ ಗೊತ್ತಿದೆ ಎಂದರು.

ಕೆಲ ಮಾಧ್ಯಮದವರು ಪೆಟ್ಟಿಗೆ ಅಂಗಡಿ, ಕಾಲೇಜು ವಿದ್ಯಾರ್ಥಿಗಳಿಗೆ ನೀವು ಯಾರಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ಮೋದಿಗೆ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ. ದೇಶ ಮತ್ತು ಹಾಸನಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ಏನು?. ನಮ್ಮ ಕುಟುಂಬವನ್ನು ಉಳಿಸಿರುವುದು ಹಳ್ಳಿಯ ಜನ. ನಮಗೆ ಮತಗಳನ್ನು ಕೊಡುವುದು ಗ್ರಾಮೀಣ ಜನತೆ ಎಂದು ಕುಮಾರಸ್ವಾಮಿ ಹೇಳಿದರು.

ಸಹೋದರ ರೇವಣ್ಣ ಅಧಿಕಾರ ಕಳೆದುಕೊಂಡ ನಂತರ ಎಂಜಿನಿಯರಿಂಗ್ ಕಾಲೇಜಿಗೆ ಪ್ರಯೋಗ ಶಾಲೆ ತರಲು ರೇವಣ್ಣ ಅವರೇ ಬರಬೇಕಾಯಿತು. ರಾಜ್ಯಕ್ಕೆ ಒಂದು ಐಐಟಿ ತರಬೇಕೆಂದು ಕೇಳಿಕೊಂಡು ರೈತರಿಂದ ಭೂಸ್ವಾಧೀನ ಮಾಡಿಕೊಂಡೆವು. ಜಿಲ್ಲೆಗೆ ಐಐಟಿ ತರಲು ಕೇಂದ್ರದಿಂದ ಒತ್ತಡ ಇರಬಹುದು. ಏನೇ ಆಗಲಿ, ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದುಸಿಎಂಮನವಿ ಮಾಡಿದರು.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿರುವುದು ನಮ್ಮ ವೈಯಕ್ತಿಕ ಕಾರಣಕ್ಕೆ ಅಲ್ಲ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ. ನಮಗೆ ಯಾವುದೇ ಸ್ವಾರ್ಥವಿಲ್ಲ. ನಮ್ಮ ತಪ್ಪಿದ್ದರೆ ಮುಕ್ತ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ನಮ್ಮ ಕುಟುಂಬ ಎಂದೂ ರಾಜಕಾರಣಕ್ಕೆ ಅಂಟಿ ಕುಳಿತಿಲ್ಲ. ಸ್ವಾರ್ಥದ ರಾಜಕಾರಣವನ್ನು ನಾವು ಮಾಡಿಲ್ಲ. ವಿಧಾನಸೌಧಕ್ಕೆ ಹೋಗಿ ಕೆಲಸ ಮಾಡಬೇಕೆಂಬ ಆಸೆ ನಮಗೆ ಬೇಕಿಲ್ಲ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿದ್ದೇವೆ ಎಂದರು.

ಕೇಂದ್ರದಿಂದ ಮೋದಿ ಅವರ ಕೊಡುಗೆ ಏನು. ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಇದ್ದಂತಹ ಉದ್ಯೋಗವನ್ನು ಕಿತ್ತುಕೊಂಡರು. ಹೀಗಿರುವಾಗ ಯುವಕರು ಬಿಜೆಪಿಗೆ ಏಕೆ ಮತ ಹಾಕುತ್ತೀರ ಎಂದು ಅವರು, 6 ತಿಂಗಳೊಳಗೆ ಸಮರೋಪಾದಿಯಲ್ಲಿ ಕೆಲಸಗಳು ಪ್ರಾರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಕ್ಷೇತ್ರದ ಅಭ್ಯರ್ಥಿಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details