ಸಕಲೇಶಪುರ: ಹಾಸನ ಜಿಲ್ಲೆಯಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ದೇವಾಲದಕೆರೆ-ಮರಗುಂದ ರಸ್ತೆಯನ್ನು ಬಂದ್ ಮಾಡಲಾಗಿದೆ.
ಚಿಕ್ಕಮಗಳೂರು-ಹಾಸನ ಜಿಲ್ಲೆ ಗಡಿಭಾಗದ ರಸ್ತೆ ಬಂದ್
ಹಾಸನ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆ ದೇವಾಲದಕೆರೆ ಮರಗುಂದ ಮಾರ್ಗದ ಸಮೀಪ ಗೋಣಿಬೀಡು ಗ್ರಾಮಸ್ಥರು ರಸ್ತೆ ಬಂದ್ ಮಾಡಿದ್ದಾರೆ.
ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ದೇವಾಲದಕೆರೆ-ಮರಗುಂದ ರಸ್ತೆಯನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮಸ್ಥರು ಅಲ್ಲಿನ ಪೊಲೀಸ್ ಸಹಯೋಗದೊಂದಿಗೆ ರಸ್ತೆಗೆ ಬೃಹತ್ ಗಾತ್ರದ ಬಂಡೆ ಕಲ್ಲುಗಳನ್ನು ಹಿಟಾಚಿ ಸಹಾಯದಿಂದ ಹಾಕಿ ಬಂದ್ ಮಾಡಿದ್ದಾರೆ. ಪರಿಣಾಮ, ವಾಹನಗಳು ತಿರುಗಾಡದಂತಾಗಿದ್ದು, ತಾಲೂಕಿನ ಗಡಿಭಾಗದ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ದೇವಾಲದಕೆರೆ, ಹಾನುಬಾಳ್ ಸುತ್ತಮುತ್ತಲಿನ ಗ್ರಾಮಗಳು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನೊಂದಿಗೆ ಗಡಿ ಹಂಚಿಕೊಂಡಿದೆ. ಇದೀಗ ದೇವಾಲದಕೆರೆ-ಮರಗುಂದ ರಸ್ತೆಯನ್ನು ಬಂದ್ ಮಾಡಿರುವುದು ಸ್ಥಳೀಯರಿಗೆ ತೊಂದರೆಯುಂಟು ಮಾಡಿದೆ.