ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್​: ಅಪಾರ ನಿರೀಕ್ಷೆಯಲ್ಲಿ ಹಾಸನ ಜಿಲ್ಲೆಯ ಜನತೆ!

ಕೋವಿಡ್-19ರ ಪರಿಣಾಮ ಲಕ್ಷಾಂತರ ಮಂದಿ ಇವತ್ತು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂತ ಘೋಷಣೆ ಮಾಡಿದ್ದ ಪ್ರಧಾನಿಯವರ ಮಾತು ಕಾರ್ಯರೂಪಕ್ಕೆ ಬಂದಿಲ್ಲ. ಈ ಬಜೆಟ್​​ನಲ್ಲಿ ಹೊಸ ಯೋಜನೆಗಳು ಮತ್ತು ಕೈಗಾರಿಕೋದ್ಯಮಗಳನ್ನು ಪ್ರಾರಂಭಿಸುವ ಮೂಲಕ ಯುವಕರಿಗೆ ಉದ್ಯೋಗವಕಾಶ ಕಲ್ಪಿಸಿಕೊಡಬೇಕು. ಸಾಲ ಮನ್ನಾ ಎಲ್ಲಾ ರೈತರಿಗೆ ಪರಿಹಾರವಲ್ಲ, ಬದಲಿಗೆ ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಅಥವಾ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ.

Central Budget tomorrow: Hassan people  waiting for Budget
ನಿರೀಕ್ಷೆಗಳ ಕಾತುರತೆಯಲ್ಲಿ ಹಾಸನ ಜನ!

By

Published : Jan 31, 2021, 10:08 PM IST

Updated : Feb 1, 2021, 10:07 AM IST

ಹಾಸನ: ಕೊರೊನಾ​ ಪ್ರೇರೇಪಿತ ಲಾಕ್​ಡೌನ್​ನಿಂದಾಗಿ ಇಡೀ ಅರ್ಥವ್ಯವಸ್ಥೆ ಮುಗ್ಗರಿಸಿ ಬಿದ್ದಿದೆ. ಪ್ರತಿಯೊಂದು ಕ್ಷೇತ್ರಗಳೂ ನಿರೀಕ್ಷೆಗಳ ಮಹಾಪೂರವನ್ನೇ ಇರಿಸಿಕೊಂಡಿವೆ. 'ಹಿಂದೆಂದೂ ಕಂಡು ಕೇಳರಿಯದಂತಹ ಬಜೆಟ್​ ನಿಮ್ಮ ಮುಂದೆ ಬರಲಿದೆ' ಎಂದು ಸೀತಾರಾಮನ್​ ಭರವಸೆ ನೀಡಿದ್ದಾರೆ. ಹೀಗಾಗಿ ಹಾಸನಕ್ಕೆ ಕಳೆದ ಬಾರಿ ನೀಡಿದ್ದ ಕೆಲವು ಯೋಜನೆಗಳ ಜೊತೆ ಈ ಬಾರಿಯೂ ಹೊಸ ಯೋಜನೆಗಳನ್ನು ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಹತ್ತು ತಿಂಗಳ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಕೊಡುಗೆಯಾಗಿ ಜಿಲ್ಲೆಗೆ ನೀಡಿದ್ದರು. ಆ ಯೋಜನೆಗಳಲ್ಲಿ ಸಾಕಷ್ಟು ನೆನೆಗುದಿಗೆ ಬಿದ್ದಿವೆ.
ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅದು ಆಲೂಗೆಡ್ಡೆ. ಇದರ ಜೊತೆಗೆ ಹತ್ತಾರು ಕೃಷಿ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಆಲೂಗೆಡ್ಡೆ ದೇಶ-ವಿದೇಶಗಳಿಗೆ ಕೂಡ ರಫ್ತಾಗುತ್ತದೆ. ಆದರೆ ನೇರವಾಗಿ ಇಲ್ಲಿಂದ ರಫ್ತು ಮಾಡಲು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಸುಮಾರು 1200 ಎಕರೆ ಪ್ರದೇಶವನ್ನು ಮೀಸಲಿಟ್ಟಿದ್ದರು. ಅವರ ನಂತರ ಬಂದ ಎಲ್ಲಾ ರಾಜಕಾರಣಿಗಳು ಈ ಯೋಜನೆಯನ್ನು ನೆನೆಗುದಿಗೆ ಬಿಡುವಂತೆ ಮಾಡಿದ್ದು ಮಾತ್ರ ನಿಜಕ್ಕೂ ದುರದೃಷ್ಟಕರ.

ನಿರೀಕ್ಷೆಗಳ ಕಾತುರತೆಯಲ್ಲಿ ಹಾಸನ ಜನ

ಈಗಾಗಲೇ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನು ಇತ್ತ ಕೃಷಿ ಚಟುವಟಿಕೆಗಳಿಗೂ ದಕ್ಕದೆ, ಅತ್ತ ವಿಮಾನ ನಿಲ್ದಾಣವೂ ಆಗದೆ ಬಂಜರು ಭೂಮಿಯಂತಾಗಿದೆ. ಹೀಗಾಗಿ ಈ ಬಾರಿ ಕನಿಷ್ಠ ಯೋಜನೆಗೆ ಹೊಸ ರೂಪ ಕೊಡಬಹುದೆಂಬ ನಿರೀಕ್ಷೆಯಲ್ಲಿ ಇಲ್ಲಿನ ಜನತೆ ಇದ್ದಾರೆ.

ಇದರ ಜೊತೆಗೆ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳು ಮತ್ತು ಮಾನವನ ಸಂಘರ್ಷ ಹೆಚ್ಚಾಗಿದೆ. ಮಾನವ ಮತ್ತು ಕಾಡುಪ್ರಾಣಿ ಸಂಘರ್ಷವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ರೈಲ್ವೆ ಕಂಬಿಗಳ ಅಳವಡಿಕೆಗೆ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂಬುದು ಮಲೆನಾಡಿಗರ ಬೇಡಿಕೆಯಾದರೆ, ಇದರ ಜೊತೆಗೆ ಹೊಸ ಯೋಜನೆಗಳನ್ನು ನೀಡುವ ಮೊದಲು ಈ ಹಿಂದೆ ಸರ್ಕಾರಗಳು ನೀಡಿರುವ ಯೋಜನೆಗಳಿಗೆ ಪುನರ್ ಚಾಲನೆ ನೀಡಬಹುದು ಎಂಬುದು ಹಾಸನ ಜನರ ನಿರೀಕ್ಷೆಯಾಗಿದೆ. ದೇಶದಲ್ಲಿ ಆರ್ಥಿಕತೆ ಸರಿದೂಗಿಸುವಲ್ಲಿ ಪ್ರಮುಖವಾಗಿರುವುದು ಅಬಕಾರಿ. ಈಗಾಗಲೇ ಅಬಕಾರಿ ಶುಲ್ಕ ಹೆಚ್ಚಳವಾಗಿರುವುದರಿಂದ ಮಧ್ಯಮ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಕೆಲಸ ಸದಸ್ಯರುಗಳು ದುಬಾರಿ ಮದ್ಯವನ್ನು ಪಡೆಯಲಾಗದೆ ಕಲಬೆರಕೆ ಮದ್ಯವನ್ನು ಸೇವನೆ ಮಾಡುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಗೆ ಕೈ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಬಕಾರಿ ಶುಲ್ಕವನ್ನು ಕಡಿಮೆಗೊಳಿಸಿ ಮಧ್ಯಮ ಹಾಗೂ ಇತರ ವರ್ಗದವರಿಗೂ ಕೈಗೆಟಕುವ ದರದಲ್ಲಿ ಮದ್ಯ ಸಿಕ್ಕಿದರೆ ಸರ್ಕಾರದ ಬೊಕ್ಕಸಕ್ಕೆ ಆದಾಯ ಮತ್ತಷ್ಟು ಹೆಚ್ಚಾಗಲಿದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯದ ಜಿಎಸ್​ಟಿ ತೆರಿಗೆಗಳನ್ನು ವಿಲೀನ ಮಾಡಿ ಏಕ ತೆರಿಗೆ ಮಾಡಿದರೆ ಹೆಚ್ಚು ಅನುಕೂಲ. ಜನರಿಗೂ ಹೊರೆಯಾಗುವುದಿಲ್ಲ ಎಂಬುದು ಕೆಲವರ ಅಭಿಪ್ರಾಯ.
ಕೇಂದ್ರ ಬಜೆಟ್​​ನಲ್ಲಿ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದ್ದು, ಇದುವರೆಗೂ ಕೂಡ ಸಾಕಷ್ಟು ಮಂದಿಗೆ ಪರಿಹಾರದ ಮೊತ್ತ ತಲುಪಿಲ್ಲ. ಇದು ಪ್ರತಿಯೊಬ್ಬ ನೆರೆಪೀಡಿತ ಕುಟುಂಬಕ್ಕೂ ತಲುಪುವಂತೆ ಮಾಡುವ ಕಾರ್ಯ ಬಜೆಟ್​ನಲ್ಲಿ ಆಗಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಗಡಿ ಸಮಸ್ಯೆ ಉದ್ಭವ ಆಗುತ್ತಲೇ ಇತ್ತು. ಇದಕ್ಕೆ ಪ್ರಧಾನಿಯವರು ಮಧ್ಯಸ್ಥಿಕೆಯಲ್ಲಿ ಸಮಿತಿ ರಚನೆ ಮಾಡುವ ಮೂಲಕ ಎರಡು ರಾಜ್ಯಗಳ ಗಡಿ ವಿವಾದವನ್ನು ಶಾಶ್ವತವಾಗಿ ಬಗೆಹರಿಸಲು ಪ್ರಯತ್ನ ಮಾಡಬೇಕು. ದೇಶದಲ್ಲಿ ನಡೆಯುತ್ತಿರುವ 60 ದಿನಗಳ ರೈತ ಚಳುವಳಿಗೆ ಅಂತ್ಯ ಹಾಡಬೇಕು. ದೇಶದ ರೈತರಿಗೆ ಮಾರಕವಾಗಿರುವ ಅಂತಹ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬುದು ಜನರ ಪ್ರಮುಖ ಬೇಡಿಕೆಯಾಗಿದೆ. ಈ ಬಜೆಟ್​​ನಲ್ಲಿ ಹೊಸ ಯೋಜನೆಗಳನ್ನು ಮತ್ತು ಕೈಗಾರಿಕೋದ್ಯಮಗಳನ್ನು ಪ್ರಾರಂಭಿಸುವ ಮೂಲಕ ಯುವಕರಿಗೆ ಉದ್ಯೋಗವಕಾಶ ಕಲ್ಪಿಸಿಕೊಡಬೇಕು. ಸಾಲ ಮನ್ನಾ ಎಲ್ಲಾ ರೈತರಿಗೆ ಪರಿಹಾರವಲ್ಲ. ಬದಲಿಗೆ ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಅಥವಾ ಶೂನ್ಯ ಬಡ್ಡಿ ದರದಲ್ಲಿ ಸಾಲದ ಸೌಲಭ್ಯವನ್ನು ಒದಗಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ.
ಓದಿ:'ನಾಳಿನ ಕೇಂದ್ರ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ': ಸಿದ್ದರಾಮಯ್ಯ

ಜೊತೆಗೆ ಹಾಸನ ಜಿಲ್ಲೆ ಪ್ರವಾಸಿ ಕೇಂದ್ರ ಹೇಮಾವತಿ ಜಲಾಶಯ ಮುಂಭಾಗ ಕೆಆರ್​ಎಸ್​ ಮಾದರಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಒತ್ತು ಕೊಡಬೇಕು. ನೂರಾರು ವರ್ಷದ ಹಳೆಯ ಚರ್ಚ್ ಮರುನಿರ್ಮಾಣದ ಕಾರ್ಯ ಮಾಡಿ ಪ್ರವಾಸೋದ್ಯಮ ಕೇಂದ್ರ ಮಾಡಬೇಕು. ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಮತ್ತಷ್ಟು ಅನುದಾನ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕು. ಕೇಂದ್ರ ಮತ್ತು ರಾಜ್ಯದ ಎರಡು ತೆರಿಗೆಗಳನ್ನು ಏಕರೂಪದ ತೆರಿಗೆಯನ್ನಾಗಿ ಮಾಡಿ ಜನಸಾಮಾನ್ಯರ ಹೊರೆಯನ್ನು ಕಡಿಮೆ ಮಾಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Last Updated : Feb 1, 2021, 10:07 AM IST

ABOUT THE AUTHOR

...view details