ಕರ್ನಾಟಕ

karnataka

ETV Bharat / state

ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ : ಕೊಲೆ ಶಂಕೆ - ಈಟಿವಿ ಭಾರತ ಕನ್ನಡ

20 ರಿಂದ 30 ವರ್ಷದ ವಯಕ್ತಿಯ ಮೃತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆಯ ಶಂಕೆ ವ್ಯಕ್ತವಾಗಿದೆ.

ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

By

Published : Feb 11, 2023, 6:36 PM IST

ಹಾಸನ: ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊರವಲಯದ ಕೊಪ್ಪಲು ರೈಲ್ವೆ ಗೇಟ್ ಸಮೀಪ ನಡೆದಿದೆ. ಕೊಲೆಯಾಗಿರುವ ವ್ಯಕ್ತಿ ಸುಮಾರು 20ರಿಂದ 30 ವರ್ಷ ವಯೋಮಾನದ ಪುರುಷ ಎಂದು ಪತ್ತೆಹಚ್ಚಿದ್ದು, ಮೃತ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ ಎಂದು ಎಸ್​ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 10 ಗಂಟೆ ಸುಮಾರಿಗೆ ಪೊಲೀಸ್​ ಠಾಣೆಗೆ ಸ್ಥಳೀಯರೊಬ್ಬರು ಕರೆ ಮಾಡಿ ಸುಟ್ಟಿರುವ ಸ್ಥಿತಿಯಲ್ಲಿ ಮೃತ ದೇಹವೊಂದು ಪತ್ತೆಯಾಗಿರುವುದಾಗಿ ತಿಳಿಸುತ್ತಾರೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಗೋಣಿ ಚೀಲದಲ್ಲಿ ದೇಹವನ್ನು ತಂದು ಸುಟ್ಟಿರುವುದಾಗಿ ತಿಳಿದು ಬಂದಿದೆ. ಮೇಲ್ನೋಟಕ್ಕೆ 20 ರಿಂದ 30 ವರ್ಷದ ಪುರಷನ ದೇಹ ಎಂದು ಗುರುತಿಸಲಾಗಿದೆ.

ಇನ್ನು ಮೃತ ವ್ಯಕ್ತಿ ಯಾರು ಮತ್ತು ಏತಕ್ಕೆ ಘಟನೆ ಸಂಭವಿಸಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಲ್ಲಿಯ ಠಾಣೆಯಲ್ಲಿ ಕೆಲ ದಿನಗಳ ಹಿಂದೆ 2 ಮಿಸ್ಸಿಂಗ್​ ಪ್ರಕರಣಗಳು ದಾಖಲಾಗಿದ್ದವು. ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದವರನ್ನು ಸ್ಥಳಕ್ಕೆ ಕರೆಯಿಸಿ ದೇಹವನ್ನು ತೋರಿಸಿದ್ದು, ಅವರಿಗೂ ದೇಹದ ಗುರುತು ಸಿಕ್ಕಿಲ್ಲ. ಅಲ್ಲದೇ ಮೈಸೂರಿನಿಂದ ಫೋರೆನ್ಸಿಕ್ ವಿಶೇಷ ತಂಡವನ್ನು ಕರೆಯಲಾಗಿದ್ದು, ಸ್ಥಳದಲ್ಲಿ ಸಿಗುವ ಸಾಕ್ಷ್ಯಗಳನ್ನು ಅವರ ತಂಡ ಕಲೆಹಾಕಲಿದೆ ಎಂದರು.

ಇನ್ನು ರೈಲ್ವೇ ಹಳಿ ಬಳಿ ಘಟನೆ ನಡೆದಿದ್ದರಿಂದ ರೈಲ್ವೇ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದರೆ ಅವರೊಂದಿಗೆ ನಾವು ಭಾಗಿಯಾಗಲಿದ್ದೇವೆ. ಇಲ್ಲವಾದಲ್ಲಿ ಪ್ರಕರಣವನ್ನು ನಮ್ಮ ಠಾಣೆಗೆ ವರ್ಗಾವಣೆ ತೆಎಗೆದುಕೊಂಡು ತನಿಖೆ ಆರಂಭಿಸಲಿದ್ದೇವೆ. ಇನ್ನು ಗುರುತು ಸಿಗಬಾರದೆಂಬ ಉದ್ದೇಶದಿಂದಲೇ ದೇಹವನ್ನು ಸುಟ್ಟು ಹಾಕಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರು: ಪ್ಲಾಸ್ಟಿಕ್ ಚೀಲದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ABOUT THE AUTHOR

...view details