ಹಾಸನ/ಸಕಲೇಶಪುರ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಮಾಗೇರಿ ಬಳಿ ದುಷ್ಕೃತ್ಯ ಸಂಭವಿಸಿದೆ.
ಕೊಲೆಗೈದ ಬಳಿಕ ಬೆಂಕಿಹಚ್ಚಿ ಅರೆಬೆಂದ ಶವವನ್ನು ಚೀಲಕ್ಕೆ ತುಂಬಿರುವ ಆರೋಪಿಗಳು ಶಿರಾಡಿ ಘಾಟ್‌ನಲ್ಲಿ ಎಸೆದಿದ್ದಾರೆ. ವ್ಯಕ್ತಿಗೆ ಸುಮಾರು 45 ವರ್ಷ ಎಂದು ಅಂದಾಜಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.