ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ಹೊರಗಿನಿಂದ ಮನೆಗಳ ಬಾಗಿಲು ಲಾಕ್ ಮಾಡಿ ಬೈಕ್ ಕಳ್ಳತನ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ಕಾಲಿನಿಂದ ಲಾಕ್ ಓಪನ್ ಮಾಡಿ ಬೈಕ್​​ ಎಗರಿಸಿದ ಖದೀಮರು. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಪಟ್ಟಣದಲ್ಲಿ ಘಟನೆ.

Bike theft at Hassan scene caught on CCTV
ಮನೆಗಳ ಬಾಗಿಲು ಲಾಕ್ ಮಾಡಿ ಬೈಕ್ ಕಳ್ಳತನ

By

Published : Nov 26, 2022, 2:14 PM IST

ಶ್ರವಣಬೆಳಗೊಳ (ಹಾಸನ): ಮನೆಗಳ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಬೈಕ್ ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.

ಪಟ್ಟಣದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಪ್ರಜ್ವಲ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್​ನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ. ಬಳಿಕ ಪಕ್ಕದ ಜೈನಬೀದಿ ಹಾಗೂ ಭಜಂತ್ರಿ ಬೀದಿಯಲ್ಲೂ ಖದೀಮರು ಬೈಕ್​​ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.

ಲಾಕ್ ಆದ ಬೈಕ್​​ನ್ನು ಓರ್ವ ತನ್ನ ಕಾಲಿನಿಂದ ಲಾಕ್ ಓಪನ್ ಮಾಡಿ ನಂತರ ಬೈಕ್​​ ಸ್ಟಾರ್ಟ್ ಮಾಡುವ ವೇಳೆ ಸೆನ್ಸಾರ್ ಅಲಾರಾಂ ಶಬ್ದ ಕೇಳಿಸಿದೆ. ಆದರೆ ಮನೆ ಬಾಗಿಲು ಲಾಕ್​​ ಆಗಿದ್ದರಿಂದ ಮಾಲೀಕ ಹೊರಬರಲಾಗದೆ ಇದ್ದಿದ್ದರಿಂದ ಖದೀಮರು ಬೈಕ್ ಎಗರಿಸಿದ್ದಾರೆ ಎಂದು ತಿಳಿದುಬಂದಿದೆ.

ಮನೆಗಳ ಬಾಗಿಲು ಲಾಕ್ ಮಾಡಿ ಬೈಕ್ ಕಳ್ಳತನ: ಸಿಸಿಟಿವಿ ದೃಶ್ಯ

ಬಳಿಕ ಬೇರೆ ಬೈಕ್​​ಗಳನ್ನ ಕಳ್ಳತನ ಮಾಡಲು ಹೋಗಿ ವಿಫಲವಾಗಿದ್ದಾರೆ. ಇತ್ತೀಚೆಗೆ ಬೈಕ್​​ಗಳಲ್ಲಿ ಸೆನ್ಸಾರ್ ಅಲಾರಾಂ ಇದ್ದು, ಸ್ಟಾರ್ಟ್ ಮಾಡುವಾಗ ಶಬ್ದ ಬರುತ್ತದೆ. ಹೀಗಾಗಿ 3 ಬೈಕ್​​ಗಳ ಲಾಕ್ ಮುರಿದು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳರ ಗ್ಯಾಂಗ್ ಗುಂಪಾಗಿ ಬಂದು ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಇದೇ ಬಡಾವಣೆಯಲ್ಲಿ ಹಾಡಹಗಲೇ ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದರು. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ರಸ್ತೆ‌ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

...view details