ಹಾಸನ:ನಾನೊಂದು ಬಡವರ ಆಸ್ಪತ್ರೆ ಕಟ್ಟಿ ಆ ಆಸ್ಪತ್ರೆಗೆ ನನ್ನ ಮಗನನ್ನೇ ಡಾಕ್ಟರ್ ಮಾಡುತ್ತೇನೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಬಡವರಿಗಾಗಿ ನಾನು ಕಟ್ಟುವ ಆಸ್ಪತ್ರೆಗೆ ನನ್ನ ಮಗನೇ ಡಾಕ್ಟರ್: ಶಾಸಕ ಶಿವಲಿಂಗೇಗೌಡ
ನನ್ನ ಮಗ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ. ಶಿಕ್ಷಣ ಮುಗಿದ ಮೇಲೆ ಉತ್ತಮ ವೈದ್ಯರೊಬ್ಬರ ಬಳಿ ತರಬೇತಿ ಕೊಡಿಸಿ, ಬಳಿಕ ನಾನು ನನ್ನ ಕ್ಷೇತ್ರದಲ್ಲಿ ಬಡವರಿಗಾಗಿ ಒಂದು ದೊಡ್ಡ ಆಸ್ಪತ್ರೆಯನ್ನ ಕಟ್ಟಿ ಆ ಆಸ್ಪತ್ರೆಗೆ ನನ್ನ ಮಗನನ್ನೇ ಡಾಕ್ಟರ್ ಮಾಡುತ್ತೇನೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಸಚಿವ ಜೆ.ಸಿ.ಮಧುಸ್ವಾಮಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಆರ್.ಸುಧಾಕರ್ ನೇತೃತ್ವದಲ್ಲಿ ನಡೆದ ಕೊರೊನಾ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗಿನಿಂದ ವೈದ್ಯರಿಗಾಗಿ ಬೇಡಿಕೆ ಇಡುತ್ತಲೇ ಬಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಸರ್ಕಾರದಿಂದ ದೊಡ್ಡ ಆಸ್ಪತ್ರೆ ಕಟ್ಟಿದ್ದೇವೆ. ಆದರೆ ಅಷ್ಟು ದೊಡ್ಡ ಕಟ್ಟಡಗಳನ್ನ ಕಟ್ಟಿ, ಅದಕ್ಕೆ ಡಾಕ್ಟರ್ ಇಲ್ಲ ಅಂದಮೇಲೆ ಯಾಕೆ ಕಟ್ಟಬೇಕು. 5ರಿಂದ 10 ಕೋಟಿ ಖರ್ಚು ಮಾಡಿ ಎಂಬಿಬಿಎಸ್ ಮಾಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಬಳಕ್ಕಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ.
ಇನ್ನು ನನ್ನ ಮಗ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ. ಶಿಕ್ಷಣ ಮುಗಿದ ಮೇಲೆ ಉತ್ತಮ ವೈದ್ಯರೊಬ್ಬರ ಬಳಿ ತರಬೇತಿ ಕೊಡಿಸಿ ಬಳಿಕ ನಾನು ನನ್ನ ಕ್ಷೇತ್ರದಲ್ಲಿ ಬಡವರಿಗಾಗಿ ಒಂದು ದೊಡ್ಡ ಆಸ್ಪತ್ರೆಯನ್ನ ಕಟ್ಟಿ ಆ ಆಸ್ಪತ್ರೆಗೆ ನನ್ನ ಮಗನನ್ನೇ ಡಾಕ್ಟರ್ ಮಾಡುತ್ತೇನೆ ಎಂದಿದ್ದಾರೆ.