ಅರಕಲಗೂಡು:ತಾಲೂಕಿನಲ್ಲಿ ಈ ವರ್ಷದ ದಸರಾ ಹಬ್ಬವನ್ನು ಸರಳವಾಗಿ ಆಚರಣೆ ನಡೆಸಲು ತಾಲೂಕು ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಅರಕಲಗೂಡಿನಲ್ಲಿ ಸರಳ ದಸರಾ ಆಚರಣೆಗೆ ನಿರ್ಧಾರ: ಶಾಸಕ ರಾಮಸ್ವಾಮಿ - Arakkalagudu Simple Dasara Ritual
ಈ ವರ್ಷ ದಸರಾ ಹಬ್ಬವನ್ನು ಅಕ್ಟೋಬರ್ 17ರಂದು ಕೋಟೆ ದೊಡ್ಡಮ್ಮ ದೇವಾಲಯ ಆವರಣದಲ್ಲಿ ಸರಳವಾಗಿ ಉದ್ಘಾಟಿಸಲಾಗುವುದು ಮತ್ತು ಅಕ್ಟೋಬರ್ 26ರ ವಿಜಯ ದಶಮಿ ದಿನದಂದು ಬನ್ನಿ ಮಂಟಪ ಕದಲಿ ಛೇದನ ಮಾಡುವ ಮೂಲಕ ಸರಳ ದಸರಾ ಆಚರಣೆ ಮಾಡಲಾಗುವುದು ಎಂದರು.
ಅರಕಲಗೂಡಿನಲ್ಲಿ ಸರಳ ದಸರಾ ಆಚರಣೆಗೆ ನಿರ್ಧಾರ: ಶಾಸಕ ಎ.ಟಿ ರಾಮಸ್ವಾಮಿ
ಪಟ್ಟಣ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಕರೆಯಲಾದ ದಸರಾ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿ ಪ್ರಸ್ತುತ ವರ್ಷದ ದಸರಾ ಹಬ್ಬದ ಆಚರಣೆಯನ್ನು ಸರಳವಾಗಿ ನಡೆಸಲು ರಾಜ್ಯ ಸರ್ಕಾರವೇ ಸೂಚನೆ ನೀಡಿದೆ.
ಅದರನ್ವಯ ಈ ವರ್ಷ ದಸರಾ ಹಬ್ಬವನ್ನು ಅಕ್ಟೋಬರ್ 17ರಂದು ಕೋಟೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಸರಳವಾಗಿ ಉದ್ಘಾಟಿಸಲಾಗುವುದು ಮತ್ತು ಅಕ್ಟೋಬರ್ 26ರ ವಿಜಯ ದಶಮಿ ದಿನದಂದು ಬನ್ನಿ ಮಂಟಪ ಕದಲಿ ಛೇದನ ಮಾಡುವ ಮೂಲಕ ಸರಳ ದಸರಾ ಆಚರಣೆ ಮಾಡಲಾಗುವುದು ಎಂದರು.