ಕರ್ನಾಟಕ

karnataka

ETV Bharat / state

ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ.. ಅಂಗನವಾಡಿ ನೌಕರರ ಪ್ರತಿಭಟನೆ

ನಾವೆಲ್ಲ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಆದರೆ ಸರ್ಕಾರ ಬೇರೆ ಬೇರೆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದೆ. ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದರು ಕೂಡ ನಮ್ಮನ್ನು ಖಾಯಂ ಮಾಡುತ್ತಿಲ್ಲ. ಖಾಯಂ ಮಾಡುವವರೆಗೂ ನಮಗೆ ಕನಿಷ್ಠ 21 ಸಾವಿರ ರೂ.ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

Anganavadi Workers protest
ಅಂಗನವಾಡಿ ನೌಕರರ ಪ್ರತಿಭಟನೆ

By

Published : Jul 14, 2020, 10:31 PM IST

ಹಾಸನ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರಿಂದ ನಗರದ ಕೆಆರ್‌ಪುರಂನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.

ನಾವೆಲ್ಲ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ, ಸರ್ಕಾರ ಬೇರೆ ಬೇರೆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದೆ. ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದರು ಕೂಡ ನಮ್ಮನ್ನು ಖಾಯಂ ಮಾಡುತ್ತಿಲ್ಲ. ಖಾಯಂ ಮಾಡುವವರೆಗೂ ನಮಗೆ ಕನಿಷ್ಠ 21 ಸಾವಿರ ರೂ.ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಪ್ರತಿಭಟನೆ

ನಿವೃತ್ತಿ ವೇತನ ಎಂದು 2011ರಲ್ಲಿ ಜಾರಿಯಾಗಿತ್ತು. ಅದು ಕೂಡ ಕೆಲವರಿಗೆ ಈವರೆಗೂ ತಲುಪಿಲ್ಲ. ಆ ಸಂಸ್ಥೆ ಕೂಡ ಮುಚ್ಚಿಹೋಗಿದೆ, ಇದಕ್ಕೆ ಸರ್ಕಾರ ಮತ್ತು ಇಲಾಖೆಯೇ ಹೊಣೆ. ನಮಗೆ ಎಲ್ಐಸಿ ಆಧಾರಿತ ಪೆನ್ಷನ್ ನೀಡಬೇಕು ಮತ್ತು ಅಂಗನವಾಡಿಗಳಲ್ಲಿ ಎಲ್​ಕೆಜಿ-ಯುಕೆಜಿ ಪ್ರಾರಂಭಿಸಬೇಕು ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ನೀಡಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details