ಕರ್ನಾಟಕ

karnataka

ETV Bharat / state

ಗುಜರಿ ಅಂಗಡಿಗೆ ಬೆಂಕಿ: ವಸ್ತುಗಳು ಸುಟ್ಟು ಭಸ್ಮ - Fire accident in Hassan

ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆ ಗುಜರಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹಾಸನ ನಗರದಲ್ಲಿ ನಡೆದಿದೆ.

dsd
ಆಕಸ್ಮಿಕವಾಗಿ ಗುಜರಿ ಅಂಗಡಿಗೆ ಬೆಂಕಿ

By

Published : Oct 9, 2020, 8:12 AM IST

ಹಾಸನ: ನಗರದ ಜಯನಗರ ಬಡಾವಣೆಯ ರಿಂಗ್ ರಸ್ತೆಗೆ ಹೊಂದಿಕೊಂಡ ನದೀಮ್ ಅಹಮದ್ ಎಂಬುವರ ಗುಜರಿ ಅಂಗಡಿ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.

ಆಕಸ್ಮಿಕವಾಗಿ ಗುಜರಿ ಅಂಗಡಿಗೆ ಬೆಂಕಿ

ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ಸ್ಫೋಟಗೊಂಡಾಗ ಭಾರಿ ಶಬ್ದ ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ಸುಮಾರು 10 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅಂಗಡಿ ಮಾಲೀಕ ನದೀಮ್ ಅಹ್ಮದ್ ಆರೋಪಿಸಿದ್ದಾರೆ.

ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಪಕ್ಕದ ಮನೆಯ ದಂಪತಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಮೂರು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಗುಜರಿ ಅಂಗಡಿ ಸೇರಿದಂತೆ ವಾಣಿಜ್ಯೀಕರಣ ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವ ನಗರಸಭೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details