ಅರಕಲಗೂಡು( ಹಾಸನ) :ಸಂಸದ ಪ್ರಜ್ವಲ್ ರೇವಣ್ಣ ಸಂಬಂಧ ಹೇಳಿಕೆ ನೀಡಿದ ಹೆಚ್ ಡಿ ರೇವಣ್ಣ ವಿರುದ್ಧ ಬಿಜೆಪಿ ಮುಖಂಡ ಎ ಮಂಜು ಆಕ್ರೋಶ ಹೊರಹಾಕಿದ್ದಾರೆ.
ಹೆಚ್ ಡಿ ರೇವಣ್ಣ ಏಳನೇ ಕ್ಲಾಸ್, ಅವನಿಗೆ ವಿಚಾರ ಗೊತ್ತಿಲ್ಲ ಎಂದ ಎ ಮಂಜು!
ನಾನು ನ್ಯಾಯಾಲಯಕ್ಕೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಆಪಿಡವಿಟ್ನಲ್ಲಿ ಇಷ್ಟು ಲಕ್ಷ ಹಣ ಇದೆ ಅಂತ ಆರೋಪ ಮಾಡಿದ್ದೆನೆ. ಇದರ ವಿರುದ್ಧ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಬಹುದಿತ್ತು ಎಂದು ಹೆಚ್ ಡಿ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದರು.
ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂಬ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಮುಗಿದಿದೆ ಎಂದು ಹೆಚ್ ಡಿ ರೇವಣ್ಣ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎ ಮಂಜು, ಅವನು ಏಳನೇ ಕ್ಲಾಸ್, ವಿಚಾರ ಗೊತ್ತಿಲ್ಲ. ನಾನು ಆಪಿಡವಿಟ್ನಲ್ಲಿ ಇಷ್ಟು ಲಕ್ಷ ಹಣ ಇದೆ ಅಂತ ಆರೋಪ ಮಾಡಿದ್ದೆನೆ. ಇದರ ವಿರುದ್ಧ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಬಹುದಿತ್ತು ಎಂದರು.
ಕಾನೂನಿನಲ್ಲಿ ಸತ್ಯಕ್ಕೆ ಜಯ ಇದೆ. ನಾಲ್ಕು ದಿನದ ಹಿಂದೆ ಎಲೆಕ್ಷನ್ ಕಮಿಷನ್ ನಿರ್ಧಾರ ತೆಗೆದುಕೊಳ್ಳೊ ಆದೇಶ ಆಗಿದೆ. ಹೀಗಾಗಿ ಕಾದು ನೋಡಿ. ಕೊರೊನಾ ಇಲ್ಲದಿದ್ರೆ ಈ ಬಗ್ಗೆ ಅವರ ವಿರುದ್ಧ ಕ್ರಮ ಜರುಗಿಸಬಹುದಿತ್ತು ಎಂದ ಅವರು, .ಪ್ರಜ್ವಲ್ ರೇವಣ್ಣ ವಿರುದ್ಧ ಸುಪ್ರಿಂನಲ್ಲಿ ಜಯ ಸಾಧಿಸೋ ವಿಶ್ವಾಸ ವ್ಯಕ್ತಪಡಿಸಿದರು.