ಹಾಸನ: ಐಟಿ ಕೇಂದ್ರ ಸರ್ಕಾರದ ಕೈಗೊಂಬೆ ಅಲ್ಲ. ಮಂತ್ರಿಯಾಗಿದ್ದುಕೊಂಡು ಅಂತಹ ಸಂಸ್ಥೆ ಬಗ್ಗೆ ಆ ರೀತಿ ಮಾತನಾಡಬಾರದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣನ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಎ.ಮಂಜು ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ಇಲಾಖೆಯು ಬಿಜೆಪಿಯ ಕೈಗೊಂಬೆ ಎಂದಿರುವ ರೇವಣ್ಣ ಅವರ ಹೇಳಿಕೆ ಸರಿಯಲ್ಲ. ಇದು ಒಂದು ದಿನದ ಕಾರ್ಯಾಚರಣೆ ಅಲ್ಲ. ಅವರಿಗೆ ಸರ್ವ ಸ್ವಾತಂತ್ರ್ಯವಿದೆ. ರೇವಣ್ಣ ಹತಾಶೆಯಿಂದ ಹೀಗೆಲ್ಲ ಮಾತಾಡುತ್ತಿದ್ದಾರೆ. ಒಂದು ವೇಳೆ ಐಟಿ ದುರುಪಯೋಗಪಡಿಸಿಕೊಂಡಿದ್ದರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಸವಾಲು ಹಾಕಿದರು.
ಪಿಡಬ್ಲ್ಯೂಡಿ ಸಚಿವ ಹೆಚ್.ಡಿ ರೇವಣ್ಣ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಎ. ಮಂಜು ತಿರುಗೇಟು ರೇವಣ್ಣನವರ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದೆ. ಮೊದಲಿಂದಲೂ ಇವರು ಹೀಗೆ ಮಾಡುತ್ತಿದ್ದಾರೆ. ಅಧಿಕಾರಿಗಳ ಮೂಲಕ ಚುನಾವಣೆ ನಡೆಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದಿನಿಂದಲೂ ಡೈರಿ ಮೇಲ್ವಿಚಾರಕರಿಂದ ಹಣ ಹಂಚುತ್ತಿರುವುದು ಗೊತ್ತಿರುವ ವಿಚಾರ ಎಂದು ಆರೋಪಿಸಿದರು.
ರಿಂಗ್ ರಸ್ತೆಯಲ್ಲಿ ಹಣ ನಮ್ಮ ಮನೆಗೆ ಹೋಗಿದೆ ಅಂತಾ ಹೇಳುವುದಕ್ಕೆ ಅವನಿಗೆ ಪಾಪ ಹೆದರಿಕೆ. ನಮ್ಮ ಮನೆಗೆ ಹೋಗಿದೆ ಅನ್ನೋಕೆ ತಾಕತ್ ಬೇಕಲ್ಲಾ ಎಂದು ಕಿಚಾಯಿಸಿದ ಎ.ಮಂಜು, ಇಲ್ಲಿ ಅವರ ಪೊಲೀಸರೇ ಇದ್ದಾರೆ. ಉದ್ದೇಶ ಪೂರ್ವಕವಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಬಾರಿ ಎಷ್ಟೇ ಹಣ ಹಂಚಿದರೂ ಜಿಲ್ಲೆಯಲ್ಲಿ ಬದಲಾವಣೆ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚನ್ನರಾಯಪಟ್ಟಣದಲ್ಲಿ ಸಿಕ್ಕಿರುವ ಹಣ ನಿಮಗೆ ಸೇರಿದೆ ಎಂಬ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಹಣ ಯಾರದ್ದೇ ಆಗಿರಲಿ, ಮೊದಲು ದೂರು ದಾಖಲಿಸಲಿ. ಇದರಲ್ಲಿ ತಾರತಮ್ಯ ಬೇಡ ಎಂದರು.ಇದೇ ವೇಳೆ ವಿಡಿಯೋ ಬಿಡುಗಡೆ ಬಗ್ಗೆ ಪ್ರಸ್ತಾಪ ಮಾಡಿದ ಎ.ಮಂಜು, ಸಮಯ ಬಂದಾಯ ಆ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.