ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಜೆಡಿಎಸ್​​ ವಿರುದ್ಧ ಗುಡುಗಿದ ಎ. ಮಂಜು

ಜೆಡಿಎಸ್​​​ನವರು ಹಾಸನ ಜಿಲ್ಲೆ ಅಭಿವೃದ್ದಿ ಮಾಡಿಲ್ಲ. ಅವರ ಆಸ್ತಿಪಾಸ್ತಿ ಇರುವ ಕಡೆಗಳಲ್ಲಿ ಅಭಿವೃದ್ದಿಗೆ ಒತ್ತು ನೀಡಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ಆರೋಪಿಸಿದ್ದಾರೆ.

jds
ಜೆಡಿಎಸ್​​ ವಿರುದ್ಧ ಎ. ಮಂಜು ವಾಗ್ದಾಳಿ

By

Published : Dec 16, 2019, 11:38 PM IST

ಹಾಸನ: ಪ್ರೀತಿ ವಿಶ್ವಾಸ ಇರುವ ಕಡೆ ಜನರು ವಿಶ್ವಾಸವಿಟ್ಟು ಮತ ಹಾಕುತ್ತಾರೆ. ಆಯಾ ಪಕ್ಷದ ನಾಯಕರು ಉಳಿದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎ. ಮಂಜು ಅವರು ತಿಳಿಸಿದ್ರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದಲ್ಲಿ ಪ್ರೀತಿ, ವಿಶ್ವಾಸ ಇರುವುದಿಲ್ಲ ಅಲ್ಲಿ ನಾಯಕರು ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.

ಜೆಡಿಎಸ್​​ ವಿರುದ್ಧ ಎ. ಮಂಜು ವಾಗ್ದಾಳಿ

ಇನ್ನು ಜೆಡಿಎಸ್ ನವರು ಹಾಸನ ಜಿಲ್ಲೆ ಅಭಿವೃದ್ಧಿ ಮಾಡಿಲ್ಲ, ಬದಲಾಗಿ ಅವರ ಆಸ್ತಿಪಾಸ್ತಿ ಇರುವ ಕಡೆಗಳಲ್ಲಿ ಮಾತ್ರ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಹೊಳೆನರಸೀಪುರ ಕ್ಷೇತ್ರ ಅಭಿವೃದ್ದಿಗೆ ಮುತುವರ್ಜಿ ವಹಿಸಿದ್ದಾರೆ. ಇವರೇನು ಹಾಸನದ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿಲ್ಲ. ನನ್ನ ಅಧಿಕಾರವಧಿಯಲ್ಲಿ ಅವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ ಎಂದರು.

ಪ್ರಚೋದನಕಾರ ರಾಜಕಾರಣ ಪ್ರಸ್ತುತ ಸಮಾಜಕ್ಕೆ ಮಾರಕವಾಗಿದೆ. ಪ್ರಸ್ತುತ ದಿನಗಳಲ್ಲಿ ಜೆಡಿಎಸ್ ನವರು ಯುವಕರನ್ನು ಪ್ರಚೋದಿಸುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ನೆಲೆಸಲು ಕಾರಣವಾಗಿದ್ದು, ಯುವಕರ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ನಂಬಿಹಳ್ಳಿ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ನಂಬಿಹಳ್ಳಿಯಲ್ಲಿ ನಡೆದ ಘಟನೆ ಸಂಬಂಧ ಸುಮಾರು 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇನ್ನು ಉಪಚುನಾವಣೆ ಹಣ ಹೆಂಡದ ಮೂಲಕ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮಂಜು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪುವರಲ್ಲ ಎಂಬುದು ಜನರಿಗೆ ಅರ್ಥವಾಗಿದೆ. ಆ ಹಿನ್ನೆಲೆಯಲ್ಲಿ ಜನರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ 12 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ ಎಂದರು. ಜೆಡಿಎಸ್ ನಾಯಕರ ಆಕ್ರೋಶಭರಿತ ಮಾತುಗಳೇ ಅವರು ಚುನಾವಣೆಯಲ್ಲಿ ಸೋಲಲು ಕಾರಣವಾಗಿದೆ ಎಂದು ಮಂಜು ವ್ಯಂಗ್ಯವಾಡಿದರು.

ABOUT THE AUTHOR

...view details