ಕರ್ನಾಟಕ

karnataka

ETV Bharat / state

ಮಂತ್ರಿಗಳ ಈ ಗೂಂಡಾಗಿರಿ ಪ್ರವೃತ್ತಿ ಕಾಂಗ್ರೆಸ್​ಗೆ ಒಳ್ಳೆಯದಲ್ಲ: ಎ.ಮಂಜು - ಡಿ.ಕೆ. ಶಿವಕುಮಾರ್​

ಡಿ.ಕೆ. ಶಿವಕುಮಾರ್​ ಅತೃಪ್ತ ಶಾಸಕರ ರಾಜಿನಾಮೆ ಪತ್ರ ಹರಿದ ಹಿನ್ನೆಲೆಯಲ್ಲಿ ಮಾತನಾಡಿರುವ ಎ.ಮಂಜು, ಪತ್ರ ಹರಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಹೇಳಿದರು. ಕಾಂಗ್ರೆಸ್​ನವರಿಗೆ ಹರಿದು ಹಾಕುವುದು ಹೊಸದೇನೂ ಅಲ್ಲ.  ಹಿಂದೆ ಈಗಲ್ಟನ್​​ನಲ್ಲಿ ಹರಿದು ಹಾಕಿ ತಿಂದಿದ್ದನ್ನು ನಾವು ನೋಡಿದ್ದೇವೆ ಎಂದರು.

ಮಾಜಿ ಸಚಿವ ಎ.ಮಂಜು

By

Published : Jul 6, 2019, 10:09 PM IST

ಹಾಸನ:ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಹರಿಯುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಈ ರೀತಿಯ ವರ್ತನೆ ಇರೋದ್ರಿಂದ ಕಾಂಗ್ರೆಸ್ ಪಕ್ಷ ಹಾಳಾಗಿದೆ. ಇವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕು ಅಂತ ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ನಾಯಕರಲ್ಲಿ ಆಗ್ರಹಿಸಿದರು.

ಮಾಜಿ ಸಚಿವ ಎ.ಮಂಜು

ಡಿ.ಕೆ.ಶಿವಕುಮಾರ್​ ಅತೃಪ್ತ ಶಾಸಕರ ರಾಜೀನಾಮೆ ಪತ್ರ ಹರಿದ ಬಗ್ಗೆ ಪ್ರತಿಕ್ರಿಯಿಸಿದ ಎ.ಮಂಜು, ಪತ್ರ ಹರಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಹೇಳಿದರು. ಕಾಂಗ್ರೆಸ್​ನವರಿಗೆ ಹರಿದು ಹಾಕುವುದು ಹೊಸದೇನೂ ಅಲ್ಲ. ಹಿಂದೆ ಈಗಲ್ಟನ್​​​ನಲ್ಲಿ ಹರಿದುಹಾಕಿ ತಿಂದಿದ್ದನ್ನು ನಾವು ನೋಡಿದ್ದೇವೆ ಎಂದರು.

ಮಂತ್ರಿಗಳ ಈ ನಡೆ ಕಾಂಗ್ರೆಸ್ ಪಕ್ಷದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದ ಎ.ಮಂಜು, ಮಂತ್ರಿಗಳ ಈ ಗೂಂಡಾಗಿರಿ ಪ್ರವೃತ್ತಿ ಒಳ್ಳೆಯದಲ್ಲ ಅಂತ ಕಿಡಿಕಾರಿದರು.

ABOUT THE AUTHOR

...view details