ಹಾಸನ :ಅನುಮಾನಸ್ಪದವಾಗಿ ಹೆಣ್ಣಾನೆಯೊಂದು ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಆನೆಗುಂಡಿ ಬಳಿ ಕಾಲುವೆಯಲ್ಲಿ ಬಿದ್ದು ಹೆಣ್ಣಾನೆ ಅನುಮಾನಾಸ್ಪದ ಸಾವು - ಹಾಸನ ಸುದ್ದಿ
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಸದ್ಯ ಜೆಸಿಬಿ ಮೂಲಕ ಕಾಲುವೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಯ ಬಳಿಕ ಶವಸಂಸ್ಕಾರ ಮಾಡಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ..

ಹೆಣ್ಣಾನೆ ಸಾವು
ಕಾಲುವೆಯಲ್ಲಿ ಬಿದ್ದು ಹೆಣ್ಣಾನೆ ಸಾವು
ತಾಲೂಕಿನ ಆನೆಗುಂಡಿ ಬಳಿ ಕಾಲುವೆಯಲ್ಲಿ ಆನೆ ಸತ್ತು ಬಿದ್ದಿದ್ದು, ವಾರದ ಹಿಂದೆ ಸಾವಿಗೀಡಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಸಹಾಯ ಪಡೆದು ಆನೆಯನ್ನು ಜೆಸಿಬಿ ಮೂಲಕ ಮೇಲೆತ್ತುವ ಕಾರ್ಯ ಮಾಡಿದ್ದಾರೆ. ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಸದ್ಯ ಜೆಸಿಬಿ ಮೂಲಕ ಕಾಲುವೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಯ ಬಳಿಕ ಶವಸಂಸ್ಕಾರ ಮಾಡಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.