ಹಾಸನ: ನವಜಾತ ಶಿಶು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಖದೀಮರನ್ನ ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕಣಿಯಾರು ಗ್ರಾಮದ ಸುಮಾ (22), ಯಶ್ವಂತ್ (28), ಅರ್ಪಿತಾ(24), ಶೈಲಜಾ (42), ಸುಶ್ಮಾ (24), ಪ್ರಕಾಶ್ (35) ಬಂಧಿತ ಆರೋಪಿಗಳು.
ಮದುವೆಯಾಗಿ ಐದು ವರ್ಷಗಳಾಗಿದ್ದರೂ ಸುಮಾಗೆ ಮಕ್ಕಳಾಗಿರಲಿಲ್ಲ. ಈ ವಿಚಾರವಾಗಿ ಸಂಸಾರದಲ್ಲಿ ನಿತ್ಯ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಸುಮಾ ತಾಯಿ ಶೈಲಜಾ ಹಾಗೂ ಸಹೋದರ ಯಶ್ವಂತ್ ಪ್ಲಾನ್ ಮಾಡಿ ಮಗು ಕಳ್ಳತನ ಮಾಡಿದ್ದಾರೆ. ನರ್ಸ್ ವೇಷಧಾರಿಯಾಗಿ ಆಸ್ಪತ್ರೆಗೆ ಎಂಟ್ರಿಯಾಗಿದ್ದ ಅರ್ಪಿತಾ ಆಸ್ಪತ್ರೆಯ ಪರಿಸ್ಥಿತಿ ಅವಲೋಕಿಸಿ ಕಳ್ಳತನಕ್ಕೆ ಪ್ಲಾನ್ ಮಾಡಲು ಯಶ್ವಂತ್ಗೆ ಸಹಾಯ ಮಾಡಿದ್ದಳು. ಕಡೆಗೆ ನಡು ರಾತ್ರಿ ಆಸ್ಪತ್ರೆ ಸಿಬ್ಬಂದಿ ಕಣ್ಣುತಪ್ಪಿಸಿ ಮಗು ಕದ್ದು ಪರಾರಿಯಾಗಿದ್ದರು. ಆಸ್ಪತ್ರೆಯ ಸಿಸಿ ಕ್ಯಾಮರಾಗಳ ದೃಶ್ಯಾವಳಿ, ಮೊಬೈಲ್ ಲೊಕೇಷನ್ ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
6 ಮಂದಿ ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ ಇನ್ಸ್ಪೆಕ್ಟರ್ ಅಸ್ಸೋಂ ಮೂಲದ ಯಾಸ್ಮಿನ್ ಹಾಗೂ ಸಿರಾಜ್ ದಂಪತಿಯ ನವಜಾತ ಗಂಡು ಮಗುವನ್ನು ಖದೀಮರು ಕದ್ದೊಯ್ದಿದ್ದರು. ಪ್ರಕರಣ ದಾಖಲಿಸಿಕೊಂಡ ಅರಕಲಗೂಡು ಪೊಲೀಸರು ಇದೀಗ ಆರು ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ.
ಯಾಸ್ಮಿನ್ ಹಾಗೂ ಸೀರಾಜ್ ದಂಪತಿ ಅಸ್ಸೋಂನಿಂದ ಕೂಲಿ ಕೆಲಸಕ್ಕೆ ಎಂದು 3 ವರ್ಷಗಳ ಹಿಂದೆ ಹಾಸನದ ಅರಕಲಗೂಡಿಗೆ ಬಂದು ಜೀವನ ಕಟ್ಟಿಕೊಂಡಿದ್ದರು. ಇಬ್ಬರು ಮಕ್ಕಳಿರುವ ಈ ದಂಪತಿಗೆ ಮಾರ್ಚ್ 14ರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವೊಂದು ಜನಿಸಿತ್ತು. ಆದರೆ, ಮಧ್ಯರಾತ್ರಿ ಇದ್ದಕ್ಕಿದ್ದಂತೆ ನರ್ಸ್ ವೇಷದಲ್ಲಿ ಕಳ್ಳಿಯೊಬ್ಬಳು ಬಂದು ಮಗು ಉಸಿರಾಟಕ್ಕೆ ಸಮಸ್ಯೆ ಆಗ್ತಿದೆ, ಬೇಗ ಹೋಗಿ ಔಷಧ ತನ್ನಿ ಅಂತ ತಂದೆಯನ್ನ ಹೊರಗೆ ಕಳುಹಿಸಿದ್ಳು. ಬಳಿಕ ತಾಯಿಗೂ ಸುಳ್ಳು ಹೇಳಿ ಮಗುವನ್ನು ಕದ್ದು ಪರಾರಿಯಾಗಿದ್ರು.
ಇದನ್ನೂ ಓದಿ:ದಲಿತ ಯುವಕನ ಮೇಲೆ ಹಲ್ಲೆ: ಆ್ಯಸಿಡ್ನಿಂದ ಹಣೆ ಮೇಲೆ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ