ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲೆಯಲ್ಲಿ ಇಂದು 56 ಕೋವಿಡ್‌ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 24,100 ಕ್ಕೆ ಏರಿಕೆ...

ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 56 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 24,100 ಕ್ಕೆ ಏರಿಕೆಯಾಗಿದೆ.

Hassan
ಆರೋಗ್ಯಾಧಿಕಾರಿ ಸತೀಶ್

By

Published : Oct 25, 2020, 4:48 PM IST

Updated : Oct 25, 2020, 8:28 PM IST

ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 56 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 24,100 ಕ್ಕೆ ಏರಿಕೆಯಾಗಿದೆ. 1 ಸಾವಿನೊಂದಿಗೆ ಮೃತರ ಸಂಖ್ಯೆ 415 ಕ್ಕೆ ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು ಬಿಡುಗಡೆಯಾದ 389 ಜನರು ಸೇರಿ ಈವರೆಗೆ 22,165 ಮಂದಿ ಗುಣಮುಖರಾಗಿದ್ದಾರೆ. 1,520 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯಾಧಿಕಾರಿ ಸತೀಶ್

ತಾಲೂಕುವಾರು ಪ್ರಕರಣ:

ಇಂದು ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-1, ಅರಕಲಗೂಡು-8, ಅರಸೀಕೆರೆ-4, ಬೇಲೂರು-4, ಚನ್ನರಾಯಪಟ್ಟಣ-3, ಹಾಸನ-30, ಹೊಳೆನರಸೀಪುರ-3, ಸಕಲೇಶಪುರ-3, ಇತರೆ- 0 ಒಟ್ಟು 56 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ತಾಲೂಕುವಾರು ಕೋವಿಡ್-19​ ಅಂಕಿ ಅಂಶಗಳ ವಿವರ

ಆರೋಗ್ಯಾಧಿಕಾರಿ ಮನವಿ :

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಆರೋಗ್ಯಾಧಿಕಾರಿ ಸತೀಶ್ ಮನವಿ ಮಾಡಿದರು.

Last Updated : Oct 25, 2020, 8:28 PM IST

ABOUT THE AUTHOR

...view details