ಗದಗ : ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನು ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರೆ ಯುವಕರಿಗೂ ಮಾದರಿಯಾಗಿದ್ದಾನೆ. ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ.
ಕೂದಲು ದಾನ ಮಾಡಿದ ಗದಗನ ಯುವಕ ಪ್ರೈವೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂಜೀವ್ ಕುಮಾರ್ ಲಾಕ್‌ಡೌನ್ ಆಗುತ್ತಿದ್ದಂತೆ ಕೆಲಸ ಬಿಟ್ಟು ಊರಿಗೆ ಮರಳಿದ್ದ. ಲಾಕ್‌ಡೌನ್‌ನಲ್ಲಿ ಸ್ಟೈಲ್‌ಗೆ ಅಂತಾ ಕೂದಲನ್ನೂ ಬಿಟ್ಟಿದ್ದ. ಕೂದಲು ಕಟ್ ಮಾಡಿ ಬಿಸಾಡೋದಕ್ಕಿಂದ ಯಾರಿಗಾದ್ರೂ ಹೆಲ್ಪ್ ಆಗುತ್ತೆ ಅಂತಾ ಯೋಚನೆ ಮಾಡಿದ್ದ.
ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಿದಾಗ ಕೂದಲು ದಾನದ ಬಗ್ಗೆ ಸಂಜೀವ್‌ಗೆ ಮಾಹಿತಿ ಸಿಕ್ಕಿತ್ತಂತೆ. ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ಮಾಡಿ ಸಹಾಯ ಮಾಡೋ ಹೈದರಾಬಾದ್ ಮೂಲದ ಗೋದಾವರಿ ಗೇರ್ ಡೋನೇಷನ್ಸ್ ಅನ್ನೋ ಎನ್‌ಜಿಒವನ್ನ ಗೂಗಲ್ ಮೂಲಕವೇ ಕಾಂಟ್ಯಾಕ್ಟ್ ಮಾಡಿದಾರೆ.
ಗೋದಾವರಿ ಈ NGO ಕ್ಯಾನ್ಸರ್ ಪೇಷೆಂಟ್‌ಗಳಿಗೆ ಉಚಿತವಾಗಿ ವಿಗ್ ತಯಾರಿಸಿ ಕೊಡುತ್ತಂತೆ. ಕೀಮೋ ಥೇರಪಿಯಲ್ಲಿ ಕೂದಲು ಕಳೆದುಕೊಂಡ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬೋ ನಿಟ್ಟಿನಲ್ಲಿ ವಿಗ್ ಮಾಡಿ ಕೊಡೋದೇ ಈ ಎನ್‌ಜಿಒ ಉದ್ದೇಶ. ಹೀಗಾಗಿ, ಈ ಎನ್‌ಜಿಒ ಕೂದಲನ್ನ ದಾನದ ರೂಪದಲ್ಲಿ ಪಡೆಯುತ್ತಂತೆ. ಎಲ್ಲ ಮಾಹಿತಿಯನ್ನ ಕಲೆಕ್ಟ್ ಮಾಡಿದ್ದ ಸಂಜೀವ್ ಕುಮಾರ್ ಎನ್‌ಜಿಒ ಸಂಪರ್ಕಿಸಿದ್ದ.
12 ಇಂಚು ಉದ್ದ ಕೂದಲನ್ನ ದಾನ ಪಡೆಯೋದಾಗಿ ಹೈದರಾಬಾದ್ ಮೂಲದ ಎನ್‌ಜಿಒ ಸಂಜೀವ್‌ಗೆ ತಿಳಿಸಿದೆ. ಹೀಗಾಗಿ, 12 ಇಂಚು ಸೊಂಪಾಗಿ ಬೆಳಸಿದ ಕೂದಲನ್ನ ಎನ್‌ಜಿಒ ಅವರು ಸಲಹೆಯಂತೆ ನೀಟಾಗಿ ಕಟ್ ಮಾಡಿಸಿ ಕೋರಿಯರ್ ಮೂಲಕ ಕಳಿಹಿಸಿಲು ಮುಂದಾಗಿದ್ದಾರೆ.
ಇದನ್ನೂ ಓದಿ : ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ
ಸಂಜೀವ್ ಕುಮಾರ್ ಸಾಮಾಜಿಕ ಕಳಕಳಿ ಹಾಗೂ ವಿಭಿನ್ನ ಆಲೋಚನೆಗೆ ಸದ್ಯ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೂದಲು ಬಿಡ್ತೀನಿ, ಎಲ್ಲಿ ಕೂದಲು ದಾನ ಮಾಡಬೇಕು ಮಾಹಿತಿ ಕೊಡಿ ಅಂತಾ ಅನೇಕ ಜನರು ದುಂಬಾಲು ಬಿದ್ದಿದಾರಂತೆ. ಕಟ್ ಮಾಡಿ ಬಿಸಾಡೋ ಕೂದಲೂ ಮತ್ತೊಬ್ಬರಿಗೆ ಸಹಾಯ ಆಗ್ಲಿ ಅನ್ನೋ ಸಂಜೀವ್ ಕುಮಾರ್ ಯೋಚನೆಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.