ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡುವುದು ಪಿಎಫ್ಐ ಸಂಘಟನೆಯ ಮೂಲ ಗುರಿ. ಪಿಎಫ್ಐ ಹಾಗೂ ಕಾಂಗ್ರೆಸ್ ನಡುವೆ ಆಂತರಿಕ ಒಪ್ಪಂದವಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಜರಂಗದಳ ನಿಷೇಧ ಮಾಡ್ತೀವಿ ಎನ್ನುತ್ತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

MLA Basan Gowda Patil Yatnal spoke to reporters.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸುದ್ದಿಗಾರರೊಂದಿಗೆ ಮಾತನಾಡಿದರು.

By

Published : May 3, 2023, 8:39 AM IST

Updated : May 3, 2023, 2:30 PM IST

ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿದರು.

ಗದಗ:ಕಾಂಗ್ರೆಸ್ ಹಿಂದು ವಿರೋಧಿ. ಈ ಪಕ್ಷಕ್ಕೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಕಿಸಿದರು. ಅಧಿಕಾರಕ್ಕೆ ಬಂದ್ರೆ ಬಜರಂಗದಳ ಬ್ಯಾನ್ ಮಾಡ್ತೇವೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಬಗ್ಗೆ ಗದಗದಲ್ಲಿ ಮಂಗಳವಾರ ಅವರು ಮಾತನಾಡಿದರು.

ನಿಷೇಧ ಸಾಧ್ಯವಿಲ್ಲ:ಬಜರಂಗ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡ್ತಿಲ್ಲ. ಹಿಂದು ಧರ್ಮ, ಸಂಸ್ಕೃತಿ, ಭಾರತದ ನಾಗರಿಕತೆ ಉಳಿಸುವ ಕೆಲಸ ಮಾಡ್ತಿದೆ. ಬಜರಂಗದಳವನ್ನು ನಿಷೇಧ ಮಾಡಲು ಜಗತ್ತಿನ ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ. ಡಿಕೆಶಿಗೆ ಧಮ್ಮಿದ್ರೆ ಮೀಸಲಾತಿ ತೆಗೆಯುವುದು, ಬಜರಂಗದಳ ನಿಷೇಧಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರವೇ‌ ಅಧಿಕಾರಕ್ಕೆ ಬರೋದಿಲ್ಲ. ಇನ್ನು ಬಜರಂಗದಳ ಬ್ಯಾನ್ ಎಲ್ಲಿಂದ ಬಂತು ಎಂದು ಇದೇ ವೇಳೆ ವ್ಯಂಗ್ಯವಾಡಿದರು. ಹಾಗೆ ಏನಾದ್ರೂ ಮಾಡಿದ್ರೆ ಎಲ್ಲಾ ಹಿಂದೂಗಳು ಅವರನ್ನೇ ಬ್ಯಾನ್ ಮಾಡ್ತಾರೆ. ಅವರು ಮುಸ್ಲಿಮ್ ಮತಗಳ ಓಲೈಕೆಗಾಗಿ ಹೀಗೆ ಮಾಡ್ತಿದ್ದಾರೆ. ಹಿಂದುಗಳ ಮತ ಅವರಿಗೆ ಬೇಕಿಲ್ಲ ಎಂದು ದೂರಿದರು.

ಕಾಂಗ್ರೆಸ್‌ಗೆ ಮತ ಹಾಕಿದ್ರೆ ಅವರು ವಿಭೂತಿ, ಕೇಸರಿ ನಿಷೇಧಿಸುತ್ತಾರೆ. ರಾಹುಲ್ ಗಾಂಧಿ ಡುಬ್ಲಿಕೇಟ್ ಗಾಂಧಿ. ಬಸವರಾಜ ಬೊಮ್ಮಾಯಿ ಮಹದಾಯಿಗಾಗಿ ಪಾದಯಾತ್ರೆ ಮಾಡಿದ್ದರು. ಅವರು ಮಹದಾಯಿ ಇತ್ಯರ್ಥ ಮಾಡಿದ್ರು ಎಂದರು.

ಕಾಂಗ್ರೆಸ್‌ನವರು ಸಾವಿರ ರೂಪಾಯಿ ಕೊಟ್ಟು ತಲೆ ಬೋಳಿಸುವ ಕೆಲಸ ಮಾಡ್ತಾರೆ. ನನ್ನ ನಾಲಿಗೆ ಕತ್ತರಿಸುತ್ತೇನೆಂದು ಡಿಕೆಶಿ ಹೇಳ್ತಾರೆ. ನಿನಗೆ ಗಂಡಸ್ತನ ಇದ್ದರೆ ನನ್ನನ್ನು ಮುಟ್ಟಿ ನೋಡು. ಸಿದ್ದರಾಮಯ್ಯ ಒಳ್ಳೆಯ ಮನುಷ್ಯ, ಹತ್ತು ಕೆ.ಜಿ ಅಕ್ಕಿ ಕೊಟ್ಟು ಬಿಜೆಪಿಗೆ ಮತ ಹಾಕಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಇದನ್ನೂಓದಿ:ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ದಿನಾಂಕ ಪ್ರಕಟ: ಮೇ 22 ರಿಂದ ಜೂನ್ 2 ರವರೆಗೆ ಪರೀಕ್ಷೆ

Last Updated : May 3, 2023, 2:30 PM IST

ABOUT THE AUTHOR

...view details