ಕರ್ನಾಟಕ

karnataka

ಕ್ವಾರಂಟೈನ್ ನಿಯಮ ಉಲ್ಲಂಘನೆ: ಸೈನಿಕ ಸೇರಿ ನಾಲ್ವರ ಮೇಲೆ ಪ್ರಕರಣ

By

Published : Aug 5, 2020, 10:27 PM IST

ಹೋಂ ಕ್ವಾರಂಟೈನ್​ನಲ್ಲಿದ್ದವರು ಮನೆಯಿಂದ ಆಚೆ ಬಂದು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕ್ವಾರಂಟೈನ್ ನಿಯಮ ಉಲ್ಲಂಘನೆ
ಕ್ವಾರಂಟೈನ್ ನಿಯಮ ಉಲ್ಲಂಘನೆ

ಗದಗ: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಸುತ್ತಾಡಿದ್ದವರ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ತಿದೆ. ಹೀಗಾಗಿ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಹರಸಾಹಸಪಡುತ್ತಿದೆ.

ಈ ನಡುವೆ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಈ ನಾಲ್ವರು ಬೇರೆ ಬೇರೆ ತಾಲೂಕುಗಳಿಗೆ ಸಂಬಂಧ ಪಟ್ಟ ವ್ಯಕ್ತಿಗಳಾಗಿದ್ದು, ಪ್ರಯಾಣದ ಹಿನ್ನೆಲೆಯಲ್ಲಿ ಜು.16 ರಿಂದ ಆ.2ರವರೆಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್​ಗೆ ಸೂಚಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ಅವರು ಮನೆಯಿಂದ ಹೊರಗೆೆ ಸುತ್ತಾಡಿರುವುದು ಪತ್ತೆಯಾಗಿದೆ.

ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ 31 ವರ್ಷದ ಸೈನಿಕ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದಾರೆ ಎಂದು ನರಗುಂದ ತಹಸೀಲ್ದಾರ್ ಮಹೇಂದ್ರ ದೂರು ದಾಖಲಿಸಿದ್ದಾರೆ. ಲಕ್ಷ್ಮೇಶ್ವರದ ಮಕಾನಗಲ್ಲಿಯ 60 ವರ್ಷದ ವ್ಯಕ್ತಿ ಮತ್ತು ತಾಲೂಕಿನ ಹುಲ್ಲೂರಿನ 62 ವರ್ಷದ ವೃದ್ಧ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡಿದ್ದಾರೆಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ದೂರು ದಾಖಲಿಸಿದ್ದಾರೆ.

ಗದಗ ನಗರದ ಹಾತಲಗೇರಿ ರಸ್ತೆ ರಿಂಗ್ ರೋಡಿನ ನಿವಾಸಿ 34 ವರ್ಷದ ವ್ಯಕ್ತಿ ನಿಯಮ ಮೀರಿ ಮನೆಯಿಂದಾಚೆ ಸುತ್ತಾಡಿದ್ದಾರೆಂದು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ದೂರು ದಾಖಲಿಸಿದ್ದಾರೆ. ಈ ನಾಲ್ವರ ಮೇಲೂ ನರಗುಂದ, ಲಕ್ಷ್ಮೇಶ್ವರ ಮತ್ತು ಬಡಾವಣೆ ಠಾಣೆಯಲ್ಲಿ ಐಪಿಸಿ ಕಲಂ 269, 271 ಮತ್ತು ಸಾಂಕ್ರಾಮಿಕ ರೋಗಗಳ ಆಕ್ಟ್-1897ರ ಕಲಂ 3ರ ಅಡಿ ಪ್ರಕರಣ ದಾಖಲಿಸಿದ್ದಾರೆ. ನರಗುಂದದ ಬನಹಟ್ಟಿಯ ಸೈನಿಕನ ಮೇಲೆ ಕ್ರಿಮಿನಲ್ ಪ್ರಕರಣವೂ ಸಹ ದಾಖಲಾಗಿದೆ.

ABOUT THE AUTHOR

...view details