ಗದಗ: ಕರ್ನಾಟಕದಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆಯೋ ಹೆಗ್ಗಳಿಕೆಗೆ ಪಾತ್ರವಾಗಿರೋ ಗದಗ ಜಿಲ್ಲೆಯ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ಅಕ್ಷರಶಃ ನಲುಗಿದ್ದಾರೆ.
ಈರುಳ್ಳಿ ಬೆಲೆ ಕುಸಿತ.. ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿ ರೈತನ ಆಕ್ರೋಶ - Onion crop Destroy
ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇಧ ಮಾಡಿದ ಬೆನ್ನಲ್ಲೇ ಈರುಳ್ಳಿ ಬೆಲೆ ಕುಸಿತಗೊಂಡಿದೆ. ಹೀಗಾಗಿ ರೈತರು ಬೆಳೆ ಸಮೇತ ಈರುಳ್ಳಿಯನ್ನ ಟ್ರ್ಯಾಕ್ಟರ್ ಮೂಲಕ ಹರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇಧ ಮಾಡಿದ ಬೆನ್ನಲ್ಲೇ ಈರುಳ್ಳಿ ಬೆಲೆ ಕುಸಿದಿದೆ. ಹೀಗಾಗಿ ರೈತರು ಬೆಳೆ ಸಮೇತ ಈರುಳ್ಳಿಯನ್ನ ಟ್ರ್ಯಾಕ್ಟರ್ ಮೂಲಕ ಹರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಅಡರಗಟ್ಟಿ ಗ್ರಾಮದ ರೈತರು ಈರುಳ್ಳಿ ಹೊಲ ಹರಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅಡರಗಟ್ಟಿ ಗ್ರಾಮದ ಗಂಗನಗೌಡ ಪಾಟೀಲ್, ಯಲ್ಲಪ್ಪ ಗಡ್ಡಪ್ಪನವರ, ಲಕ್ಷ್ಮಣ ಬಂಗಿ, ಈರಪ್ಪ ಬಂಗಿ ಸೇರಿದಂತೆ ಬಹುತೇಕ ಈರುಳ್ಳಿ ಬೆಳೆದ ರೈತರು ಹೊಲ ಹರಗುತ್ತಿದ್ದಾರೆ. ತಮ್ಮ 2-3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದಾರೆ. ಎಕರೆಗೆ 20 ರಿಂದ 30 ಸಾವಿರ ರೂ. ಖರ್ಚು ಮಾಡಿದ್ದರು. ಈಗ ಬೆಲೆ ಕುಸಿದಿದ್ದಕ್ಕೆ ರೈತರು ನಷ್ಟ ಅನುಭವಿಸಿದ್ದಾರೆ.
ದಿಢೀರ್ ಬೆಲೆ ಕುಸಿತದಿಂದ ಕುಸಿದು ಹೋದ ಕೆಲ ರೈತರು ಬೆಳೆಯನ್ನ ತೆಗೆಯದೆ ಹೊಲದಲ್ಲಿಯೇ ಕೊಳೆಸುತ್ತಿದ್ದಾರೆ. ಇನ್ನೂ ಕೆಲವರು ಬೆಳೆಯನ್ನ ಕಟಾವ್ ಮಾಡಿ ಹಾಗೆ ಬಿಟ್ಟಿದ್ದಾರೆ. ಬೆಳೆ ತೆಗೆದರೂ ಕಟಾವ್ ಮಾಡಿದ ಖರ್ಚೂ ಸಹ ಬರದಂತ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಹೀಗಾಗಿ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಬೇಕು, ಇಲ್ಲವೇ ಪರಿಹಾರ ಕೊಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.