ಕರ್ನಾಟಕ

karnataka

ETV Bharat / state

ಏಸು ಕ್ರಿಸ್ತನ ನಿಷ್ಠೆ ಅಲ್ಲಾ, ಅದು ಸೋನಿಯಾ ನಿಷ್ಠೆ: ಡಿಕೆಶಿ ನಡೆಗೆ ಪ್ರಹ್ಲಾದ ಜೋಶಿ ಟೀಕೆ - ಏಸು ಪ್ರತಿಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಹ್ಲಾದ ಜೋಶಿ

ಸರ್ಕಾರಿ ಜಾಗದಲ್ಲಿ ಸರಿಯಾಗಿ ಅನುಮತಿ ಪಡೆಯದೇ ಏಸು ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವುದು ತಪ್ಪು. ಇದೇ ಕಾರಣಕ್ಕೆ ಬಿಜೆಪಿ ಪಕ್ಷ ಆಕ್ಷೇಪ ಮಾಡುತ್ತಿದೆ ಹೊರತು ಯಾವುದೇ ಧರ್ಮದ ವಿರುದ್ಧವಲ್ಲ ಆದರೆ ತುಷ್ಟೀಕರಣದ ರಾಜಕಾರಣಕ್ಕೆ ಬಿಜೆಪಿಯ ವಿರೋಧ ಇದೆ ಹೊರತು ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿಯೂ ಅಲ್ಲ, ಕ್ರಿಶ್ಚಿಯನ್ ವಿರೋಧಿಯೂ ಅಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ.

Prahlada joshi
ಪ್ರಹ್ಲಾದ ಜೋಶಿ

By

Published : Jan 13, 2020, 7:39 PM IST

ಗದಗ:ಡಿ.ಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿಯವರಿಗೆ ತಮ್ಮ ನಿಷ್ಠೆ ತೋರಿಸಬೇಕೆಂದು ಏಸು ಪ್ರತಿಮೆ ನಿರ್ಮಿಸುತ್ತಿದ್ದಾರೆ ಹೊರತು ಏಸು ಕ್ರಿಸ್ತನಿಗೋಸ್ಕರ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೆದುರು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಗದಗನಲ್ಲಿ ಏರ್ಪಡಿಸಿದ್ದ ಜನಜಾಗೃತಿ ಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮದವರೆದುರು ಮಾತನಾಡಿದ ಜೋಷಿ, ಪ್ರತಿಮೆ ನಿರ್ಮಾಣ ಏಸುಕ್ರಿಸ್ತನ ನಿಷ್ಠೆ ಅಲ್ಲ. ಅದು ಸೋನಿಯಾ ನಿಷ್ಠೆಯಾಗಿದೆ. ಡಿ ಕೆ ಶಿವಕುಮಾರ್ ಅವರು ಏನಾದರೂ ಮಾಡಿ ವಿರೋಧ ಪಕ್ಷದ ನಾಯಕ ಅಥವಾ ರಾಜ್ಯಾಧ್ಯಕ್ಷರಾಗಬೇಕು ಎನ್ನುವ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಏಸು ಒಳ್ಳೇದು ಮಾಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಸರ್ಕಾರಿ ಜಾಗದಲ್ಲಿ ಸರಿಯಾಗಿ ಅನುಮತಿ ಪಡೆಯದೇ ಏಸು ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವುದು ತಪ್ಪು. ಇದೇ ಕಾರಣಕ್ಕೆ ಬಿಜೆಪಿ ಪಕ್ಷ ಆಕ್ಷೇಪ ಮಾಡುತ್ತಿದೆ ಹೊರತು ಯಾವುದೇ ಧರ್ಮದ ವಿರುದ್ಧವಲ್ಲ ಆದರೆ ತುಷ್ಟೀಕರಣದ ರಾಜಕಾರಣಕ್ಕೆ ಬಿಜೆಪಿಯ ವಿರೋಧ ಇದೆ ಹೊರತು ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿಯೂ ಅಲ್ಲ, ಕ್ರಿಶ್ಚಿಯನ್ ವಿರೋಧಿಯೂ ಅಲ್ಲ ಎಂದರು.

ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ ಬಳ್ಳಾರಿಗೆ ಹೋಗಿ ಯಾಕೆ ಭಾಷಣ‌ ಮಾಡಬೇಕು ಅನ್ನೋ ಯು.ಟಿ.ಖಾದರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜೋಷಿ, ಯು ಟಿ ಖಾದರ್​ ಸಹ ಬೇರೆ ಬೇರೆ ಕಡೆ ಹೋಗಿ ಭಾಷಣ ಮಾಡ್ತಾರೆ. ಅಲ್ಲದೇ ಪೌರತ್ವ ಕಾಯ್ದೆ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಎಲ್ಲಿ ಭಾಷಣ ಮಾಡಬೇಕು ಎಲ್ಲಿ ಮಾಡಬಾರದು ಎನ್ನುವುದು ಆಯಾ ಜಿಲ್ಲಾಡಳಿತ ಅದನ್ನು ನಿರ್ಧರಿಸುತ್ತೆ. ಯು.ಟಿ ಖಾದರ್ ಏನು ಬಹಳ ಸಂಪನ್ನ ಅಂತಾ ಮಾತನಾಡುತ್ತಾರೆ ಅಂತ ತಿರುಗೇಟು ನೀಡಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ನಕಾರವಾಗಿಯೇ ಉತ್ತರಿಸಿದ ಪ್ರಹ್ಲಾದ ಜೋಶಿ ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೋ ಅದೇ ನನ್ನ ಮಾತು ಎಂದು ಉತ್ತರಿಸಿದರು.

ABOUT THE AUTHOR

...view details