ಕರ್ನಾಟಕ

karnataka

ETV Bharat / state

ನರಗುಂದ ಅಂಗನವಾಡಿ ಶಿಕ್ಷಕಿಗೆ ಸೋಂಕು: ರೇಷನ್​ ಪಡೆದ ಗರ್ಭಿಣಿ, ಬಾಣಂತಿಯರಲ್ಲಿ ಆತಂಕ

ನರಗುಂದದ ಸಿದ್ಧಾಪುರ ಗ್ರಾಮದ ಅಂಗನವಾಡಿ ಶಿಕ್ಷಕಿಗೆ ಕೋವಿಡ್​-19 ತಗುಲಿದೆ. ಅವರ ಸಂಪರ್ಕಕ್ಕೆ ಬಂದಿದ್ದವರಲ್ಲಿ ಕೆಲವರನ್ನು ಶಾಲೆಯಲ್ಲಿ ಮತ್ತು ಗರ್ಭಿಣಿಯರು, ಬಾಣಂತಿಯರನ್ನು ಹೋಮ್​​​ ಕ್ವಾರಂಟೈನ್​​​ ಮಾಡಲಾಗಿದೆ.

Municipality
ಪುರಸಭೆ

By

Published : Jul 6, 2020, 1:00 PM IST

ಗದಗ:ನರಗುಂದ ತಾಲೂಕಿನ ಸಿದ್ಧಾಪುರ ಗ್ರಾಮದ ಅಂಗನವಾಡಿ ಶಿಕ್ಷಕಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಅವರಿಂದ ರೇಷನ್​ ಪಡೆದಿರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಆತಂಕ ಶುರುವಾಗಿದೆ.

ನರಗುಂದದ ಗಾಡಿ ಓಣಿಯ ನಿವಾಸಿಯಿಂದ (ರೋಗಿ ಸಂಖ್ಯೆ-18,277) ಸೋಂಕು ಹರಡಿದೆ ಎನ್ನಲಾಗ್ತಿದೆ. ಕಂಡಕ್ಟರ್​​ ಆಗಿ ಕಾರ್ಯನಿರ್ವಹಿಸುತ್ತಿರುವ ಸಹೋದರನಿಗೆ (ರೋಗಿ ಸಂಖ್ಯೆ-15,320) ಜುಲೈ 3ರಂದು ಸೋಂಕು ಶಿಕ್ಷಕಿಗೂ ತಗುಲಿದೆ.

ನರಗುಂದ ಪಟ್ಟಣ

ಈ ಶಿಕ್ಷಕಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 52 ಜನರನ್ನು ನರಗುಂದದ ಖಾಸಗಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಬ್ಬರು ಗರ್ಭಿಣಿಯರು ಮತ್ತು ಇಬ್ಬರು ಬಾಣಂತಿಯರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸಿದ್ಧಾಪುರ ಗ್ರಾಮಕ್ಕೆ ತಹಶೀಲ್ದಾರ್​ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ABOUT THE AUTHOR

...view details