ಕರ್ನಾಟಕ

karnataka

ಖಾನಾಪುರ ಜನರನ್ನು ಬೆಚ್ಚಿ ಬೀಳಿಸುತ್ತಿದೆ ವಾನರಸೇನೆ...  ನೆರೆಯೂರಿನ ಜನರ ಮೇಲೂ ಅಟ್ಯಾಕ್​

By

Published : Jun 17, 2020, 9:29 PM IST

ಶಿರಹಟ್ಟಿ ತಾಲೂಕಿನ‌ ಖಾನಾಪುರದಲ್ಲಿ ಜನರು ಮಂಗಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಮಂಗಗಳಿಗೆ ಹೆದರಿ ಮನೆಗಳ ಮೇಲ್ಛಾವಣಿಗೆಲ್ಲಾ ಮುಳ್ಳು ಹಾಕಿದ್ದಾರೆ.

People are bored with the monkey problem in Khanapur
ಖಾನಾಪುರದಲ್ಲಿ ಮಂಗನಾಟ :ಆತಂಕದಲ್ಲಿ ಜನರು

ಗದಗ:ಜಿಲ್ಲೆಯ ಶಿರಹಟ್ಟಿ ತಾಲೂಕಿನ‌ ಖಾನಾಪುರದಲ್ಲಿ ಜನರು ಮಂಗಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಮಂಗಗಳಿಗೆ ಹೆದರಿ ಮನೆಗಳ ಮೇಲ್ಛಾವಣಿಗೆಲ್ಲಾ ಮುಳ್ಳು ಹಾಕಿದ್ದಾರೆ.

ಇನ್ನು ಈ ಮಂಗಗಳಿಗೆ ಹೆದರಿದ ಪರ ಗ್ರಾಮದ ಜನರು ಖಾನಾಪುರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಊರಿಗೆ ಬಂದವರು ಕೈಯಲ್ಲಿ ಏನಾದರು ವಸ್ತುವನ್ನು ತಂದರೆ ಮಂಗಗಳು ಅವರ ಮೇಲೆ ದಾಳಿ ಮಾಡುತ್ತವೆ. ಈ ಭಯದಿಂದ ಜನರು ಹೈರಾಣಾಗಿದ್ದಾರೆ.

ಖಾನಾಪುರದಲ್ಲಿ ಮಂಗನಾಟ

ಇನ್ನು ಮನೆಗಳ ಮೇಲ್ಚಾವಣಿಗಳ ಮೇಲೆ ರಾಜಾರೋಷವಾಗಿ ಓಡಾಡುವ ಕೋತಿಗಳು, ಮನೆಯ ಬಾಗಿಲು ತೆರೆದಿದ್ದರೆ ಹೊಳಗೂ ಕೂಡ ಪ್ರವೇಶಿಸಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಗ್ರಾಮದಲ್ಲಿ 300ಕ್ಕೂ ಅಧಿಕ ಮಂಗಗಳಿದ್ದು, ಈ ಬಗ್ಗೆ ಪಟ್ಟಣ ಪಂಚಾಯತಿ, ಶಿರಹಟ್ಟಿ ತಹಶಸೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು, ಸೇರಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದ್ರೆ ಯಾವ ಪ್ರಯೋಜನವೂ ಇಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ABOUT THE AUTHOR

...view details