ಗದಗ:ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡವರನ್ನು ಸಚಿವ ಸಿ.ಸಿ.ಪಾಟೀಲ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗಿ ಮಾನವೀಯತೆ ಮೆರೆದ ಸಚಿವ ಸಿ.ಸಿ.ಪಾಟೀಲ್ - ಸಚಿವ ಸಿ. ಸಿ .ಪಾಟೀಲ್
ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡವರನ್ನು ಸಚಿವ ಸಿ.ಸಿ.ಪಾಟೀಲ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ.
road accident
ಗದಗದಿಂದ ಹುಲಕೋಟಿ ಕಡೆ ಹೋಗುವ ವೇಳೆ ಟಂಟಂ ವಾಹನ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಈ ವೇಳೆ ಇದೇ ಮಾರ್ಗವಾಗಿ ಹೋಗುತ್ತಿದ್ದ ಸಚಿವ ಸಿ.ಸಿ.ಪಾಟೀಲ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.