ಗದಗ: ಕನ್ನಡ ನಾಡಿನ ನಿತ್ಯೋತ್ಸವ ಗೀತೆಯ ಮೂಲಕ ನಾಡ ಸಂಸ್ಕೃತಿ, ಪರಿಸರ ಕುರಿತು ಜನರಿಗೆ ಅಭಿಮಾನ ಮೂಡಿಸಿದ್ದ ಕವಿ ಕೆ.ಎಸ್.ನಿಸಾರ್ ಅಹಮದ್ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ನಿಧನಕ್ಕೆ ಸಚಿವ ಸಿ.ಸಿ.ಪಾಟೀಲ ಸಂತಾಪ
ಗದಗ: ಕನ್ನಡ ನಾಡಿನ ನಿತ್ಯೋತ್ಸವ ಗೀತೆಯ ಮೂಲಕ ನಾಡ ಸಂಸ್ಕೃತಿ, ಪರಿಸರ ಕುರಿತು ಜನರಿಗೆ ಅಭಿಮಾನ ಮೂಡಿಸಿದ್ದ ಕವಿ ಕೆ.ಎಸ್.ನಿಸಾರ್ ಅಹಮದ್ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ನಿತ್ಯೋತ್ಸವದ ಕವಿ ನಿಸ್ಸಾರ ಅಹಮ್ಮದ ನಿಧನ: ಸಚಿವ ಸಿ.ಸಿ.ಪಾಟೀಲ ಸಂತಾಪ
ಮೂಲತಃ ಭೂ ವಿಜ್ಞಾನ ಸ್ನಾತಕೋತ್ತರ ಪದವೀಧರರಾಗಿ, ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ತಮ್ಮ ಕನ್ನಡ ಸಾಹಿತ್ಯ ಕೃಷಿಯಿಂದಾಗಿ ರಾಜ್ಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಅನೇಕ ಸಾಹಿತ್ಯಿಕ ಪ್ರಶಸ್ತಿಗೆ ಭಾಜನರಾಗಿದ್ದರು.
ಇವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ನೀಡಲಿ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವ ಸಿ.ಸಿ.ಪಾಟೀಲ ಸಂತಾಪ ಸೂಚಿಸಿದ್ದಾರೆ.