ಗದಗ:ಕೊರೊನಾದಿಂದ ಎಲ್ಲಾ ಅದ್ಧೂರಿ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ ವಿಜೃಂಭಣೆಗೆ ವಿದಾಯ ಹೇಳಲಾಗಿದ್ದು, ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿಯೇ ಮದುವೆ ಮಾಡಿಸಲಾಗ್ತಿದೆ.
ಹೆಚ್ಚಾಗುತ್ತಿದೆ 'ಬ್ರಾಹ್ಮಿ ಮುಹೂರ್ತ'ದ ಮದುವೆ... ಕಾರಣ ಬಲು ವಿಚಿತ್ರ! - ಲಾಕ್ಡೌನ್ ವೇಳೆ ಮಧ್ಯರಾತ್ರಿ ಮದುವೆ ಲೇಟೆಸ್ಟ್ ನ್ಯೂಸ್
ಲಾಕ್ಡೌನ್ ಉಲ್ಲಂಘನೆ ಆಗಬಾರದು ಅಂತಾ ಮಧ್ಯರಾತ್ರಿಯಲ್ಲೇ ಮದುವೆಗಳನ್ನು ನೆರವೇರಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಲಾಕ್ಡೌನ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶ ಸೇರಿದಂತೆ ಮದುವೆಗೆ ಬೇಕಾದ ಪರವಾನಿಗೆಗಾಗಿ ಓಡಾಡುವುದು ಕಷ್ಟವೆಂದು ಯೋಚಿಸಿ ಈ 15ಕ್ಕೂ ಹೆಚ್ಚು ಜೋಡಿಗಳು ರಾತ್ರಿಯೇ ಹೊಸ ಜೀವನಕ್ಕೆ ಕಾಲಿಟ್ಟಿವೆ. ಕೊರೊನಾದಿಂದ ಅದ್ಧೂರಿ ಮದುವೆಗಳನ್ನು ಬದಿಗೊತ್ತಿದ ಕುಟುಂಬಗಳು ರಾತ್ರೋರಾತ್ರಿ ಮದುವೆ ಏರ್ಪಡಿಸಿ ಬೆಳಗಿನಜಾವ ಮತ್ತೆ ಯಥಾಸ್ಥಿತಿ ಕಾಪಾಡಿಕೊಂಡಿವೆ.
ರಾತ್ರಿ ಹೊತ್ತಲ್ಲಿ ಮದುವೆ ಮಾಡಿದರೂ ಸಂಪ್ರದಾಯಕ್ಕೆ ಯಾವುದೇ ಕೊರತೆ ಆಗಿಲ್ಲ. ಅರಿಶಿಣ ಕಾರ್ಯಕ್ರಮ, ಸುರಗಿ ನೀರಿನ ಕಾರ್ಯಕ್ರಮ ಅಂತ ಸಾಕಷ್ಟು ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ಮಧ್ಯರಾತ್ರಿ ಎರಡು ಗಂಟೆಯಿಂದ ಬೆಳಗಿನಜಾವ 4 ಗಂಟೆಯವರೆಗೂ ಇರೋ ಬ್ರಾಹ್ಮಿ ಮುಹೂರ್ತದಲ್ಲಿ ಮದುವೆ ನೆರವೇರಿಸಲಾಗಿದೆ. ನಾವು ಹಳ್ಳಿಯ ಜನರಾದರೂ ಸರ್ಕಾರ ಹೊರಡಿಸಿದ ಎಲ್ಲಾ ನಿಯಮಗಳನ್ನು ಪಾಲಿಸಿದ್ದೇವೆ. ಮತ್ತೊಬ್ಬರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿಯೇ ರಾತ್ರಿ ಸಮಯದಲ್ಲಿ ಈ ಮದುವೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಮದುವೆಗೆ ಬಂದ ಅತಿಥಿಗಳಿಗೆ ಸಾಮಾಜಿಕ ಅಂತರದೊಂದಿಗೆ ಬೆಳಗ್ಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಸುಮ್ಮನೆ ಯಾಕೆ ರೋಗ ತರಿಸಿಕೊಳ್ಳೋದು ಅಂತ ಇಲ್ಲಿನ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ.
ನಮ್ಮ ಬಂಧು-ಬಳಗ ಬಾಳ ದೊಡ್ಡವು ಹಗಲು ಮದುವೆ ಮಾಡಿದ್ರ ಜನರು ಬಾಳ್ ಸೇರ್ತಾರ, ಅದಕ್ಕ ರಾತ್ರಿ ಮದುವೆ ಮಾಡಿದ್ರೆ ಯಾರೂ ಸೇರಲ್ಲ. ಆರ್ಥಿಕ ವೆಚ್ಚದ ಜೊತೆಗೆ ಮುಂದೆ ಆಗಬೇಕಿದ್ದ ಅನಾಹುತವನ್ನು ತಡೆದಿದ್ದೇವೆ ಅಂತಾರೆ ಇಲ್ಲಿನ ಜನ.