ಕರ್ನಾಟಕ

karnataka

ETV Bharat / state

ನಿಂತಿದ್ದ ಬೈಕ್​ಗೆ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ದಾರುಣ ಸಾವು

ನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ವಿರಾಮಕ್ಕೆಂದು ರಸ್ತೆ ಬದಿ ನಿಂತಿದ್ದ ವೇಳೆ ದುರ್ಘಟನೆಯೊಂದು ನಡೆದಿದೆ. ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

By

Published : Jun 28, 2019, 10:14 AM IST

Updated : Jun 28, 2019, 11:15 AM IST

ನಿಂತಿದ್ದ ಬೈಕ್​ಗೆ ಲಾರಿ ಡಿಕ್ಕಿ

ಗದಗ:ನಿಂತಿದ್ದ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಬಳಿ ನಡೆದಿದೆ.

ಮೃತರನ್ನು ಅಸ್ಸೋಂ ಮೂಲದ ಪಿಂಟು (30) ಹಾಗೂ ಬಿಹಾರ ಮೂಲದ ಇಮಾಮ್(32) ಎಂದು ಗುರುತಿಸಲಾಗಿದೆ. ಮೃತರು ಕೆಎನ್​​ಆರ್​ ಕನ್ಸ್ಟ್ರಕ್ಷನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ನಿಂತಿದ್ದ ಬೈಕ್​ಗೆ ಲಾರಿ ಡಿಕ್ಕಿ, ಇಬ್ಬರು ಸಾವು

ನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 28, 2019, 11:15 AM IST

ABOUT THE AUTHOR

...view details