ಕರ್ನಾಟಕ

karnataka

ETV Bharat / state

ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿದ ಲಾರಿಗಳು: ವಾಹನ ಸವಾರರ ಪರದಾಟ

ಕೊಣ್ಣೂರು ಬಳಿ ದುರಸ್ತಿಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿ ಸಿಲುಕಿಕೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

ಕೊಣ್ಣೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿದ ಲಾರಿಗಳು
ಕೊಣ್ಣೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿದ ಲಾರಿಗಳು

By

Published : Aug 23, 2020, 12:57 PM IST

ಗದಗ: ಜಿಲ್ಲೆಯಲ್ಲಿ ಮತ್ತೆ ಮಲಪ್ರಭಾ ನದಿಯ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ದುರಸ್ತಿಯಲ್ಲಿದ್ದ ಕೊಣ್ಣೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ಸಿಲುಕಿಕೊಂಡು ಚಾಲಕರು ಪರದಾಡುವಂತಾಗಿದೆ.

ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿದ ಲಾರಿಗಳು

ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾವಾಹಕ್ಕೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿತ್ತು. ನಿನ್ನೆ ದುರಸ್ತಿ ಕಾಮಗಾರಿ ನಡೆದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಇಂದು ನದಿಯ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆ ಪಕ್ಕ ಭೂಮಿ ತೇವಗೊಂಡಿದ್ದು, ಹೀಗಾಗಿ ದುರಸ್ತಿಯಲ್ಲಿದ್ದ ಹೆದ್ದಾರಿಯಲ್ಲಿ ಎರಡು ಲಾರಿ ಸಿಲುಕಿಕೊಂಡಿವೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಇತರೆ ಲಾರಿಗಳು ಸಾಲುಗಟ್ಟಿ ನಿಂತಿವೆ.

ABOUT THE AUTHOR

...view details