ಕರ್ನಾಟಕ

karnataka

ETV Bharat / state

ಗದಗದಲ್ಲಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ: ಬಾಲಕ ಸ್ಥಳದಲ್ಲೇ ಸಾವು - ಕೆಎಸ್ಆರ್​ಟಿಸಿ ಬಸ್

ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ನಗರದ ಭೀಷ್ಮಕೆರೆಯ ಬನ್ನಿಕಟ್ಟೆ ಬಳಿ ನಡೆದಿದೆ.

ಭೀಷ್ಮಕೆರೆ ಬಳಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ

By

Published : Oct 3, 2019, 6:19 PM IST

ಗದಗ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಭೀಷ್ಮಕೆರೆಯ ಬನ್ನಿಕಟ್ಟೆ ಬಳಿ ನಡೆದಿದೆ.

ಭೀಷ್ಮಕೆರೆ ಬಳಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ

ಎಂಟು ವರ್ಷದ ಕಿಷನ್ ಸಾವನ್ನಪ್ಪಿದ ಬಾಲಕ.

ಆಟವಾಡುತ್ತಿದ್ದ ಕಿಷನ್ ಮೇಲೆ ಬಸ್ ಏಕಾಏಕಿ ಹರಿದಿದೆ. ನಂತರ ಅಲ್ಲಿಯೇ ನಿಂತಿದ್ದ ಕಾರ್​ ಹಾಗೂ ಟ್ರಾನ್ಸ್​ಫಾರ್ಮರ್​ಗೂ ಸಹ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ವಿದ್ಯುತ್ ತಂತಿ ಕಟ್ ಆಗದೇ ಇರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ರಾಣಿಬೆನ್ನೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಈ ಬಸ್​ನಲ್ಲಿ 30 ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ರು ಎಂದು ತಿಳಿದು ಬಂದಿದೆ.

ಗದಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details