ಗದಗ:ನಿನ್ನೆ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕಿಟಕಿ-ಗಾಜು ಒಡೆದು, ಆತಂಕದ ವಾತಾವರಣ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಜಿಮ್ಸ್ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಎಫ್‌ಐಆರ್ ದಾಖಲು - Jims medical staff assault case
ಜಿಮ್ಸ್ ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15ರಿಂದ 20 ಜನರ ಮೇಲೆ ಗದಗ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಲಾಗಿದೆ.
ಮೃತ ರೋಗಿ ದೊಡ್ಡ ಹನುಮಂತಪ್ಪ ಪೂಜಾರ ಪುತ್ರ ಚೇತನ್ ಪೂಜಾರ್ ಮತ್ತು ಆತನ ಜೊತೆಗಿದ್ದ 15ರಿಂದ 20 ಜನರ ಮೇಲೆ ಕರ್ತವ್ಯಕ್ಕೆ ಅಡ್ಡಿ, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ವೈದ್ಯಕೀಯ ಪರಿಕರಗಳ ನಾಶ ಆರೋಪದಡಿ ನಿನ್ನೆ ರಾತ್ರಿಯೇ ಗದಗ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್.ಭೂಸರಡ್ಡಿ, ಚೇತನ್ ಪೂಜಾರ್ ಮತ್ತು ಇತರ 15-20 ಜನರ ಗುಂಪು ಜಿಮ್ಸ್ನಲ್ಲಿ ದಾಂಧಲೆ ನಡೆಸಿ, ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅಶ್ಲೀಲವಾಗಿ ನಿಂದಿಸಿದ್ದಾರೆ. ಆಸ್ಪತ್ರೆಯ ಆಸ್ತಿಗೂ ಹಾನಿ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.