ಕರ್ನಾಟಕ

karnataka

ಜನ ಸಂಪರ್ಕ ಹೆಚ್ಚಿಸುತ್ತಿರುವ ಮಾಜಿ ಸಚಿವ : ಜನ ಸೇವೆಗೆ ಹೊಸ ಪಕ್ಷ ಕಟ್ಟುವರೇ ಜನಾರ್ದನ ರೆಡ್ಡಿ ?

By

Published : Dec 7, 2022, 7:49 AM IST

ಅಡ್ವಾಣಿಯವರ ರಾಮ ರಥಯಾತ್ರೆ ಮೂಲಕ ಕೆಲಸ ಆರಂಭ ಮಾಡಿದ್ದೆ. ಬಿಜೆಪಿಯಿಂದ ರಾಜಕೀಯ ಆರಂಭವಾಗಿದೆ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು.

janardhana-reddy-new-political-party
ಜನಾರ್ದನ ರೆಡ್ಡಿ

ಗದಗ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಂಗಳವಾರ ಸಂಜೆ ಕೆಲವೇ ಕೆಲವು ಬೆಂಬಲಿಗರು ಮತ್ತು ಫೋಟೋ ವಿಡಿಯೋ ಟೀಮ್​ನೊಂದಿಗೆ ಬಂದು ಗದಗದ ಬಸವೇಶ್ವರ ಗಾರ್ಡನ್​ನಲ್ಲಿ ಕಾಣಿಸಿಕೊಂಡರು. ಬಸವೇಶ್ವರ ಮೂರ್ತಿ ದರ್ಶನಕ್ಕೂ ಮುಂಚೆ ಗದಗನಲ್ಲಿರೋ ಸಚಿವ ಶ್ರೀರಾಮುಲು ಅವರ ಮನೆಗೆ ಹೋಗಿ ಬಂದಿದ್ದಾರೆ‌. ನಂತರ ಕೆಲ ಹೊತ್ತು ಗಾರ್ಡನ್​ನಲ್ಲಿ ವಿಡಿಯೋ, ಫೋಟೋ ಶೂಟ್ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಸವೇಶ್ವರ ಮೂರ್ತಿ ನೋಡೋದಕ್ಕೆ ಬಂದಿದ್ದೆ ಅಂತಾ ಹೇಳಿದರು. ತೋಂಟದಾರ್ಯ ಸ್ವಾಮೀಜಿಗಳ ಆಶಯದಂತೆ ಬಸವೇಶ್ವರ ಮೂರ್ತಿ ನಿರ್ಮಿಸಲಾಗಿದೆ. ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ನಾನು ಪ್ರವಾಸೋದ್ಯಮ ಸಚಿವನಾಗಿದ್ದೆ. ಆಗ ಬಸವೇಶ್ವರ ಪುತ್ಥಳಿ ಸ್ಥಾಪನೆ ಒತ್ತಾಯ ಇತ್ತು. ಈ ಭಾಗದ ಜನರ ಆಶಯದಂತೆ ಪುತ್ಥಳಿ ನಿರ್ಮಾಣವಾಗಿದೆ. ನುಡಿದಂತೆ ನಡೆದಿದ್ದೇವೆ. ನೆನಪಿಗಾಗಿ ಸ್ಥಳಕ್ಕೆ ಭೇಟಿ ನೀಡಿ ಫೋಟೋ ವಿಡಿಯೋ ತೆಗೆದುಕೊಳ್ಳಬೇಕೆಂದಿದ್ದೆ. ಬಸವಣ್ಣ ಜೀವಂತವಾಗಿ, ಸಾಕ್ಷಾತ್ ನಿಂತಂತಿದೆ ಅಂತಾ ಮೂರ್ತಿಯ ಬಗ್ಗೆ ಬಣ್ಣಿಸಿದರು.

ಜನ ಸೇವೆಗೆ ಹೊಸ ಪಕ್ಷ ಕಟ್ಟುವರೇ ಜನಾರ್ದನ ರೆಡ್ಡಿ?

ಬಿಜೆಪಿ ನನ್ನ ಮೂಲ:ಹೊಸ ರಾಜಕೀಯ ಪಕ್ಷ ಆರಂಭಿಸುತ್ತೀರಾ ಅನ್ನೋ ಪ್ರಶ್ನೆಗೆ, ಬಿಜೆಪಿಯಿಂದ ರಾಜಕೀಯ ಆರಂಭವಾಗಿದೆ. ಅಡ್ವಾಣಿಯವರ ರಾಮ ರಥಯಾತ್ರೆ ಮೂಲಕ ಕೆಲಸ ಆರಂಭ ಮಾಡಿದ್ದೆ. ಏನಿದ್ದರೂ ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನ ಇರುತ್ತೆ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅನ್ನೋದರ ಬಗ್ಗೆ ನೋಡುತ್ತೇನೆ ಎಂದು ಹೇಳುವ ಮೂಲಕ ಎಲ್ಲೂ ತಮ್ಮ ನಡೆಯನ್ನು ಸ್ಪಷ್ಟವಾಗಿ ಹೇಳಲಿಲ್ಲ.

ಜನ ಸಂಪರ್ಕದಲ್ಲಿದ್ದೇನೆ:ಹೊಸ ಪಕ್ಷದ ವಿಚಾರವಾಗಿ ಹೆಚ್ಚು ಮಾತಾಡಲ್ಲ. ಇನ್ನೂ ಸಮಯ ಇದೆ. ನಾಯಕರ ಸಂಪರ್ಕ ಅಲ್ಲ, ಜನ ಸಂಪರ್ಕದಲ್ಲಿದ್ದೇನೆ. ನಮ್ಮ ಜೊತೆ ಜನರಿದ್ದಾರೆ ಎಂದು ನಾಯಕರ ಸಂಪರ್ಕ ವಿಚಾರವಾಗಿ ಹೇಳಿದರು.

ಇದನ್ನೂ ಓದಿ:ಕಾಲಿಗೆ ಗಾಲಿ ಕಟ್ಟಿಕೊಂಡು ಗಣಿ ಉದ್ಯಮಿ ಜನಾರ್ದನ ರೆಡ್ಡಿ ಪ್ರವಾಸ: ಬಿಜೆಪಿಗರಿಗೆ ಗಾಳ

ABOUT THE AUTHOR

...view details