ಗದಗ: ಚರಂಡಿ ಪಕ್ಕದಲ್ಲೇ ನವಜಾತ ಶಿಶು ಬಿಸಾಡಿಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಕೆ.ಸಿ.ರಾಣಿ ರಸ್ತೆಯಲ್ಲಿರುವ ದುಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆ ಹಿಂಭಾಗದಲ್ಲಿ ನಡೆದಿದೆ.
ಗದಗ ಆಸ್ಪತ್ರೆ ಬಳಿಯ ಚರಂಡಿ ಪಕ್ಕದಲ್ಲಿ ನವಜಾತ ಶಿಶು ಪತ್ತೆ - Infant found in Gadag
ಗದಗನ ಕೆಸಿ ರಾಣಿ ರಸ್ತೆಯಲ್ಲಿರುವ ದುಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆ ಬಳಿಯ ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ.
ಚರಂಡಿ ಪಕ್ಕದಲ್ಲಿ ನವಜಾತ ಶಿಶು ಪತ್ತೆ
ನಿನ್ನೆ ರಾತ್ರಿ ಮಗು ಹುಟ್ಟಿದೆ ಎನ್ನಲಾಗುತ್ತಿದೆ. ಸದ್ಯ ಸ್ಥಳಕ್ಕೆ ಬೆಟಗೇರಿ ಬಡಾವಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಯಾರೋ ಮಾಡಿದ ತಪ್ಪಿಗೆ ಸದ್ಯ ನವಜಾತ ಶಿಶುವೊಂದು ಬೀದಿಗೆ ಬಿದ್ದಿದೆ. ಈ ಅಮಾನವೀಯ ಘಟನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.