ಕರ್ನಾಟಕ

karnataka

ETV Bharat / state

ಅಕ್ರಮ ಮದ್ಯ ಮಾರಾಟ: ರೊಚ್ಚಿಗೆದ್ದ ಮಹಿಳೆಯರಿಂದ ಮನೆ ಮೇಲೆ ದಾಳಿ: VIDEO - protest in gadag

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಮನೆಗಳ ಮೇಲೆ ಮಹಿಳೆಯರು ದಾಳಿ ನಡೆಸಿ, ಪ್ರತಿಭಟನೆ ‌ಮಾಡಿರೋ ಘಟನೆ‌ ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ  ನಡೆದಿದೆ.

womens  protest in gadag
ಅಕ್ರಮ ಮದ್ಯ ಮಾರಾಟ ಗದಗ ಮಹಿಳೆಯರ ಪ್ರತಿಭಟನೆ

By

Published : Dec 3, 2019, 11:48 AM IST

ಗದಗ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಮನೆಗಳ ಮೇಲೆ ಮಹಿಳೆಯರು ದಾಳಿ ನಡೆಸಿ, ಪ್ರತಿಭಟನೆ ‌ಮಾಡಿರೋ ಘಟನೆ‌ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ನಡೆದಿದೆ.

ಗದಗನಲ್ಲಿ ಪ್ರತಿಭಟನೆ

ಹಲವಾರು ದಿನಗಳಿಂದ ಅಕ್ರಮವಾಗಿ ಮದ್ಯ ಮಾರಾಟದಿಂದ ರೋಸಿಹೋದ ಸ್ವ-ಸಹಾಯ ಸಂಘದ ಮಹಿಳೆಯರು ಮದ್ಯ ಮಾರಾಟ ಮಾಡುವ ಮನೆ ಮೇಲೆ ದಾಳಿ ನಡೆಸಿ ಅವರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ 4 ಮನೆಗಳಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಪೊಲೀಸ್​ ಇಲಾಖೆಗೆ ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ದಿನೇ ದಿನೆ ಇದೆ ವ್ಯವಹಾರ ಹೆಚ್ಚಾಗುತಲಿದ್ದು, ದುಡಿದ ದುಡ್ಡನ್ನೆಲ್ಲ ಮದ್ಯ ಸೇವನೆಗೆ ಬಳಸುತ್ತಿದ್ದಾರೆ. ಕೆಲವರು ಮನೆಯಲ್ಲಿನ ಪಾತ್ರೆ ಸೇರಿದಂತೆ ಬೆಲೆಬಾಳುವ ವಸ್ತಗಳನ್ನ ಸಹ ಒತ್ತೆಯಿಟ್ಟು ಮದ್ಯ ಸೇವನೆ ಮಾಡುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ‌ ಈ ಕೆಲಸ ಮಾಡಿದ್ದೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ದಾಳಿ ನಡೆಸಿದ ವೇಳೆ ಸಿಕ್ಕ ಮದ್ಯದ ಟೆಟ್ರಾಪ್ಯಾಕ್​ಗಳನ್ನು ಹೊರೆಗೆಸೆದು ಆಕ್ರೋಶ ವ್ಯಕ್ತಪಡಿಸಿದರು. ಇವತ್ತಿನಿಂದ ಸಾರಾಯಿ ಮಾರಾಟ ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details