ಕರ್ನಾಟಕ

karnataka

ETV Bharat / state

4 ವರ್ಷದ ಹಿಂದೆ ಪ್ರೀತಿಸಿ ಮದುವೆ.. ಗದಗದಲ್ಲಿ ಸ್ಕೂಟಿ ಕಲಿಯುತ್ತಿದ್ದ ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ! - apurva getting treatement in hospital at gadaga

Gadag Murder case.. ತಾಳಿ ಕಟ್ಟಿದ ಗಂಡನೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಗದಗದಲ್ಲಿ ನಡೆದಿದೆ. ಹಲ್ಲೆಗೊಳಗಾದ ಅಪೂರ್ವ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡ್ತಿದ್ದಾರೆ. 2018 ರಲ್ಲಿ ಅಪೂರ್ವ ಮತ್ತು ಇಜಾಜ್​​ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

husband who tried to murder and kill his wife
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಗಂಡ

By

Published : Mar 10, 2022, 5:57 PM IST

Updated : Mar 10, 2022, 6:50 PM IST

ಗದಗ: ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿರುವ ಲಯನ್ಸ್ ಶಾಲೆಯ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದಿದೆ. ಗದಗ ನಿವಾಸಿ ಅಪೂರ್ವ ಅವರ ಮೇಲೆ ಪತಿ ಇಜಾಜ್ ಹಲ್ಲೆ ಮಾಡಿದ್ದಾನೆ.

ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

2018ರಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹುಬ್ಬಳ್ಳಿಯ ಕೌಲ್ ಬಜಾರ್ ನಿವಾಸಿ ಇಜಾಜ್ ಮತ್ತು ಅಪೂರ್ವ ಮೊದಲೆಲ್ಲಾ ಚೆನ್ನಾಗಿಯೇ ಇದ್ರು. ಆದ್ರೆ ಆದ್ಯಾವಾಗ ಇಜಾಜ್​ಗೆ ಮೊದಲೇ ಮದುವೆಯಾಗಿ ಮೂರು ಮಕ್ಕಳಿವೆ ಎಂಬ ವಿಷಯ ಅಪೂರ್ವಗೆ ಗೊತ್ತಾಯಿತೋ, ಅಂದಿನಿಂದ ಅಂದ್ರೆ ಕಳೆದ ಐದಾರು ತಿಂಗಳಿನಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.

ಇಜಾಜ್ ಮತ್ತು ಅಪೂರ್ವ

ಬಳಿಕ ಅಪೂರ್ವ ತನ್ನ ತಾಯಿ ಮನೆಗೆ ಬಂದಿದ್ದಾಳೆ. ಇವರಿಬ್ಬರ ಪ್ರೀತಿಗೆ ಸಾಕ್ಷಿ ಎನ್ನುವಂತೆ ಒಂದೂವರೆ ವರ್ಷದ ಮಗು ಸಹ ಇದೆ. ಇಂದು ಬೆಳಗ್ಗೆ ಲಯನ್ಸ್ ಶಾಲೆಯ ಮೈದಾನದಲ್ಲಿ ಅಪೂರ್ವ ಸ್ಕೂಟಿ ಓಡಿಸೋದನ್ನು ಕಲಿಯಬೇಕಾದ್ರೆ ಏಕಾಏಕಿ ಬಂದಿರೋ ಇಜಾಜ್ ಮಚ್ಚಿನಿಂದ ಅಕೆಯ ಮೇಲೆ 20ಕ್ಕೂ ಹೆಚ್ಚು ಕಡೆ ಹಲ್ಲೆ ಮಾಡಿದ್ದಾನೆ. ಅಪೂರ್ವ ಈಗ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಇದನ್ನೂ ಓದಿ:ಅನ್ಯ ಧರ್ಮದ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ.. ಕಲಬುರಗಿಯಲ್ಲಿ ನಾಲ್ವರು ಆರೋಪಿಗಳು ಅರೆಸ್ಟ್​

ಇಜಾಜ್ ಬಗ್ಗೆ ಮಾಹಿತಿ ದೊರೆತಿದ್ದು, ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸಲಾಗುವುದೆಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ. ಗುರುವಾರ ಬೆಳಗ್ಗೆ ಆರೂವರೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಜಾಜ್ ಹಲ್ಲೆ ಮಾಡೋದನ್ನು ಹಲವರು ನೋಡಿದ್ದಾರೆ. ಇವರ ಈ ಪ್ರೇಮ ವಿವಾಹಕ್ಕೆ ಮೊದಲಿನಿಂದಲೂ ಅಪೂರ್ವ ಮನೆಯಲ್ಲಿ ವಿರೋಧವಿತ್ತು. ಆದ್ರೆ ಅದನ್ನೆಲ್ಲಾ ಧಿಕ್ಕರಿಸಿ ರಿಜಿಸ್ಟಾರ್ ಮದುವೆಯಾಗಿದ್ದಕ್ಕೆ ಅನಿವಾರ್ಯವಾಗಿ ಮನೆಯವರು ಸುಮ್ಮನಾಗಿದ್ರು. ಆಗಾಗ್ಗೆ ಗಂಡ ಹೆಂಡತಿ ನಡುವೆ ವೈಮನಸ್ಸು ಬರ್ತಿತ್ತಂತೆ.

Last Updated : Mar 10, 2022, 6:50 PM IST

For All Latest Updates

TAGGED:

ABOUT THE AUTHOR

...view details