ಗದಗ :ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿವೆ. ಹಲವು ಕಡೆಗಳಲ್ಲಿ ಭಾರಿ ಮಳೆಗೆ ಮನೆಗಳು ಕುಸಿದು ಬಿದ್ದಿವೆ. ನಗರದ ಮ್ಯಾಗೇರಿ ಓಣಿಯಲ್ಲಿ ಮನೆಯ ಛಾವಣಿ ಕುಸಿದು ಮನೆಯವರು ಅದೃಷ್ಟವಶಾತ್ ಪಾರಾಗಿರುವ ಘಟನೆ ನಡೆದಿದೆ. ದುರ್ಗವ್ವ ಮುತ್ತಪ್ಪ ನಡಿಗೇರಿ ಎಂಬುವರಿಗೆ ಸೇರಿದ ಮನೆಯ ಭಾಗಶಃ ಕುಸಿತಗೊಂಡಿದೆ.
ಧಾರಾಕಾರ ಮಳೆಗೆ ಮನೆಯ ಛಾವಣಿ ಕುಸಿತ: ಅದೃಷ್ಟವಶಾತ್ ಮನೆಯವರು ಪಾರು
ಭಾರಿ ಮಳೆಗೆ ಗದಗ ಜಿಲ್ಲೆಯ ಮ್ಯಾಗೇರಿ ಓಣಿಯಲ್ಲಿ ಮನೆಯ ಛಾವಣಿ ಕುಸಿದು, ಅದೃಷ್ಟವಶಾತ್ ಮನೆಯವರು ಪಾರಾಗಿರುವ ಘಟನೆ ನಡೆದಿದೆ.
ಧಾರಾಕಾರ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ : ಅದೃಷ್ಟವಶಾತ್ ಮನೆಯವರು ಪಾರು
ದುರ್ಗವ್ವ ಅವರು ನಗರಸಭೆ ಪೌರ ಕಾರ್ಮಿಕರಾಗಿದ್ದು, ನಗರಸಭೆ ವತಿಯಿಂದ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ಭರವಸೆ ಈಡೇರಿಸಲಾಗಿಲ್ಲ. ಸದ್ಯ ಮನೆಯ ಛಾವಣಿ ಕುಸಿತದಿಂದ ಕಂಗಾಲಾಗಿರುವ ಮನೆಯವರು, ಬೇರೆ ಮನೆ ನಿರ್ಮಿಸಿಕೊಡುವಂತೆ ಒತ್ತಾಯ ಮಾಡಿದ್ದಾರೆ.
ಓದಿ :ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದ ಮನೆಗೆ ನುಗ್ಗಿದ ನೀರು.. ನಗರವಾಸಿಗಳಿಂದ ಆಕ್ರೋಶ