ಗದಗ:ಜಿಲ್ಲಾದ್ಯಂತ ಇಂದು 2 ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರಿಗೆ ವರುಣದೇವ ತಂಪೆರೆದಿದ್ದಾನೆ.
ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆ.. ರೈತನ ಮೊಗದಲ್ಲಿ ಮಂದಹಾಸ - gadag news
ಗದಗ ಜಿಲ್ಲೆಯಲ್ಲಿ ಇಂದು 2 ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದ್ದು, ನಗರದ ಎಪಿಎಂಸಿ ಆವರಣ ನೀರಿನಿಂದ ತುಂಬಿ, ಹೊಳೆಯಂತಾಗಿದೆ.
ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆ..ರೈತನ ಮೊಗದಲ್ಲಿ ಮಂದಹಾಸ
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ಇಂದು ನಗರ ಸೇರಿದಂತೆ ಜಿಲ್ಲೆಯ ನರಗುಂದ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ ತಾಲೂಕಿನಲ್ಲಿಯೂ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ನಗರದ ಎಪಿಎಂಸಿ ಆವರಣ ನೀರಿನಿಂದ ತುಂಬಿ ಹೊಳೆಯಂತಾಗಿದೆ.
ಇನ್ನು, ಮುಂಗಾರು ಬಿತ್ತನೆ ಮಾಡಿ, ಮಳೆಗಾಗಿ ಕಾಯುತ್ತಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.