ಗದಗ:ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಗೊದಾಮಿನ ಮೇಲೆ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಬಡವರ ಹೊಟ್ಟೆ ಸೇರಬೇಕಿದ್ದ 40 ಟನ್ಗೂ ಹೆಚ್ಚು ಅಕ್ಕಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ನಗರದ ಅಬ್ಬಿಗೇರಿ ಕಾಂಪೌಂಡ್, ತೀಸ್ ಬಿಲ್ಡಿಂಗ್ ಹಾಗೂ ನಿಸರ್ಗ ಬಡಾವಣೆಯಲ್ಲಿನ ಗೋಡೌನ್ಗಳಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿಡಲಾಗಿತ್ತು.