ಗದಗ:ಜಿಲ್ಲಾಡಳಿತದ ಭವನದಲ್ಲಿಂದು ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡರ ನೇತೃತ್ವದಲ್ಲಿ ಸಾಮಾನ್ಯಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಅಧಿಕಾರಿಗಳು ನಿದ್ದೆ ಹಾಗೂ ಮೊಬೈಲ್ನಲ್ಲಿ ಬ್ಯೂಸಿಯಾಗಿದ್ದರು.
ಆರೋಗ್ಯ, ಶಿಕ್ಷಣ ಇಲಾಖೆಗಳ ಪ್ರಗತಿಯ ಕುರಿತು ಗಂಭೀರ ಚರ್ಚೆಗಳು ಸಭೆಯಲ್ಲಿ ನಡೆಯುತ್ತಿದ್ದವು. ಆದರೆ, ಈ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ, ಬಹುತೇಕ ಇನ್ನುಳಿದ ಇಲಾಖೆಯ ಅಧಿಕಾರಿಗಳು ಸಭೆಗೂ ನಮಗೂ ಸಂಬಂಧವಿಲ್ಲ ಎಂಬಂತೆ ಮೊಬೈಲ್ನಲ್ಲಿ ತಲ್ಲೀನರಾಗಿದ್ದರು. ಅವರೊಂದಿಗೆ ಕೆಲ ಜಿಲ್ಲಾ ಪಂಚಾಯಿತಿ ಸದಸ್ಯರೂ ಸಹಿತ ಮೊಬೈಲ್ನಲ್ಲಿ ಮಗ್ನರಾಗಿದ್ದರು.