ಕರ್ನಾಟಕ

karnataka

'2 ತಿಂಗಳು ಮನೆ ಬಾಡಿಗೆ ಬೇಡ, ಕೊರೊನಾ ಬರದಂತೆ ಎಚ್ಚರದಿಂದಿರಿ': ಮನೆ ಮಾಲೀಕರ ಮಾನವೀಯತೆ

By

Published : Mar 27, 2020, 3:29 PM IST

ಎರಡು ತಿಂಗಳು ಮನೆ ಬಾಡಿಗೆ ಕೊಡಬೇಡಿ, ಕೊರೊನಾ ಬರದಂತೆ ಎಚ್ಚರದಿಂದ ಇರಿ ಎಂದು ಹೇಳುವ ಮೂಲಕ ಗದಗದಲ್ಲಿ ಮನೆ ಮಾಲೀಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಹಿನ್ನೆಲೆ ಬಾಡಿಗೆ ಬೇಡವೆಂದ ಮನೆ ಒಡತಿ
ಕೊರೊನಾ ಹಿನ್ನೆಲೆ ಬಾಡಿಗೆ ಬೇಡವೆಂದ ಮನೆ ಒಡತಿ

ಗದಗ: ಕೊರೊನಾ ವೈರಸ್​ಗೆ​ ಇಡೀ ಪ್ರಪಂಚವೇ ನಲುಗಿ ಹೋಗಿದ್ದು ಸಾವಿರಾರು ಜನರ ಪ್ರಾಣ ಕಿತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳು ಮನೆ ಬಾಡಿಗೆ ಕೊಡಬೇಡಿ, ಕೊರೊನಾ ಬರದಂತೆ ಎಚ್ಚರದಿಂದ ಇರಿ ಎಂದು ಹೇಳುವ ಮೂಲಕ ಮನೆ ಮಾಲೀಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಹಿನ್ನೆಲೆ ಬಾಡಿಗೆ ಕಟ್ಟಬೇಡಿ ಎಂದರು ಮನೆ ಒಡತಿ!

ಗದಗ ನಗರದ ಬಿಸಿಕೆರೆ ಬಳಿಯ ಉಡಚಮ್ಮನ ದೇವಸ್ಥಾನದ ಬಳಿ ಇರೋ ಪುಷ್ಪ ಪೂಜಾರ್ ಎನ್ನುವವರು ಕೊರೊನಾ ಕುರಿತು ಮನೆಯಲ್ಲಿಯೇ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಸಂಕಷ್ಟದಿಂದ ಮನೆ ಬಾಡಿಗೆ ಕಟ್ಟುವುದು ಹೇಗೆ ಅಂತ ಚಿಂತಿಸುತ್ತಿದ್ದ ಸುಮಾರು ನಾಲ್ಕು ಬಾಡಿಗೆದಾರ ಕುಟುಂಬಗಳಿಗೆ ಮನೆಯೊಡತಿ ಪುಷ್ಪ, ಮುಂದಿನ ಎರಡು ತಿಂಗಳು ಬಾಡಿಗೆ ಕಟ್ಟುವುದು ಬೇಡ ಅಂತ ತಿಳಿಸಿದ್ದಾರೆ. ಇದರಿಂದ ದಿನಗೂಲಿ ಹಾಗು ಇತರೆ ವ್ಯಾಪಾರ ಮಾಡಿಕೊಂಡಿದ್ದ 4 ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ.

ಪ್ರತಿ ತಿಂಗಳು ಪುಷ್ಪ ಅವರಿಗೆ ಸುಮಾರು 8 ರಿಂದ 9 ಸಾವಿರ ರೂ. ಬಾಡಿಗೆ ಹಣ ಬರುತ್ತಿತ್ತು. ಆದ್ರೆ, ದೇಶಾದ್ಯಂತ ಲಾಕ್ ಡೌನ್ ಆದೇಶ ಜಾರಿಯಾದ ಹಿನ್ನೆಲೆಯಲ್ಲಿ ಬಡವರ ಸಹಾಯಕ್ಕೆ ಅವರು ಮುಂದಾಗಿದ್ದಾರೆ.

ABOUT THE AUTHOR

...view details